Latest

ಈ ಹಣ್ಣಿನಿಂದ ಬಂಜೆತನ ನಿವಾರಣೆಯಾಗುತ್ತೆ!!ಪೋಷಕಾಂಶಗಳು ಯಥೇಚ್ಛವಾಗಿರುವ ಆ ಹಣ್ಣು ಯಾವುದು ಗೊತ್ತಾ?

394
Spread the love

ನ್ಯೂಸ್‌ ನಾಟೌಟ್: ದಾಳಿಂಬೆ ಹಣ್ಣು ,ರುಚಿಯಲ್ಲಿ ಮಾತ್ರವಲ್ಲ, ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡಬಲ್ಲ ಅದ್ಭುತವಾದ ಹಣ್ಣು. ಇದರಲ್ಲಿ ಹಲವು ಪೋಷಕಾಂಶಗಳು ಅಡಗಿವೆ. ಇವುಗಳನ್ನು ಏಳು ದಿನಗಳ ಕಾಲ ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ದಾಳಿಂಬೆಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸ ಬಲ್ಲ ಪೋಷಕಾಂಶಗಳು ಇವೆ. ಅಲ್ಲದೇ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ದಾಳಿಂಬೆ ಹಣ್ಣು ಸಹಕಾರಿ.. ಜೊತೆಗೆ ದಾಳಿಂಬೆಯಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ದಾಳಿಂಬೆ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುವುದಲ್ಲದೇ, ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಒಳ್ಳೆಯದು.

ಮುಖ್ಯವಾಗಿ ಕೆಂಪಾದ ಹಣ್ಣಿನಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿರುವ ಕಬ್ಬಿಣವು ರಕ್ತಹೀನತೆಯನ್ನು ತಡೆದು, ಮೆದುಳಿನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ. ದಾಳಿಂಬೆಯಲ್ಲಿರುವ ಪೊಟ್ಯಾಸಿಯಮ್ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಮೆಗ್ನೀಸಿಯಮ್ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ವಿಶೇಷವಾಗಿ ದಾಳಿಂಬೆ ಹಣ್ಣು ಪೋಷಕಾಂಶಗಳ ನಿಧಿಯಾಗಿದ್ದು, ಮಕ್ಕಳಾಗದೇ ಇದ್ದವರು ಈ ಹಣ್ಣನ್ನು ದಿನಕ್ಕೊಂದು ತಿಂದರೇ ಪೋಷಕರಾಗುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ.

ಇದರಲ್ಲಿರುವ  ನಾರು ಹೊಟ್ಟೆ ತುಂಬಿದ ಭಾವನೆಯನ್ನು ಮೂಡಿಸಲು ಸಹಾಯ ಮಾಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಇದರಿಂದ ತೂಕವನ್ನೂ ಇಳಿಸಿಕೊಳ್ಳಬಹುದು.. ಈ ಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮಕ್ಕೆ ಒಳ್ಳೆಯದು. ಇವು ಸುಕ್ಕುಗಳು ಮತ್ತು ಮೊಡವೆಗಳನ್ನು ತಡೆಯುತ್ತವೆ ಮತ್ತು ಚರ್ಮವನ್ನು ಯೌವ್ವನದಿಂದ ಇಡುತ್ತವೆ.

ದಾಳಿಂಬೆಯನ್ನು ಅತಿಯಾಗಿ ತಿನ್ನುವುದರಿಂದ ಸಮಸ್ಯೆಗಳಾಗಬಹುದು. ಅಜೀರ್ಣ ಮತ್ತು ಅತಿಸಾರದಂತಹ ಸಮಸ್ಯೆಗಳು ಉಂಟಾಗಬಹುದು.ದಾಳಿಂಬೆ ರಸವನ್ನು ಅತಿಯಾಗಿ ಕುಡಿಯುವುದರಿಂದ ಹಲ್ಲು ಹುಳುಕಾಗಬಹುದು.ಮಧುಮೇಹ ಇರುವವರು ದಾಳಿಂಬೆ ತಿನ್ನುವಾಗ ಜಾಗರೂಕರಾಗಿರಬೇಕು.

See also  ಮಂಗಳೂರು: ಸ್ನೇಹಮಯಿ ಕೃಷ್ಣ ವಿರುದ್ಧದ ವಾಮಾಚಾರ ಪ್ರಕರಣಕ್ಕೆ ಟ್ವಿಸ್ಟ್..! ಮಹಿಳಾ ಪೊಲೀಸ್ ಅಧಿಕಾರಿಯ ಕೈವಾಡ..!
  Ad Widget   Ad Widget   Ad Widget   Ad Widget