ಕ್ರೈಂದೇಶ-ಪ್ರಪಂಚ

ವ್ಯಾನ್ ಒಳಗೆ ಗುಂಡು ಹಾರಿಸಿಕೊಂಡು ದುರಂತ ಅಂತ್ಯ ಕಂಡ ಪೊಲೀಸ್ ಹೆಡ್ ಕಾನ್ ಸ್ಟೇಬಲ್! ಹಲವು ಅನುಮಾನಗಳಿಗೆ ಕಾರಣವಾದ ಆತ್ಮಹತ್ಯೆ!

ನ್ಯೂಸ್ ನಾಟೌಟ್ :  ನಗರದ ಸಿವಿಲ್ ಲೈನ್ಸ್ ಪ್ರದೇಶದ ಚಂದಗಿ ರಾಮ್ ಅಖಾರಾ ಬಳಿ ಇರುವ ದೆಹಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಪಿಸಿಆರ್ ವ್ಯಾನ್‌ನಲ್ಲಿ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.

ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಪ್ರಕಾರ, ಬೆಳಿಗ್ಗೆ 6.25 ರ ಸುಮಾರಿಗೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಪಿಸಿಆರ್ ವ್ಯಾನ್ ಉಸ್ತುವಾರಿ ಹೆಡ್ ಕಾನ್‌ಸ್ಟೆಬಲ್ ಇಮ್ರಾನ್ ಮೊಹಮ್ಮದ್ ಅವರು ಗುಂಡು ಹಾರಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. “ಇಮ್ರಾನ್ ಅವರನ್ನು ಬಾರಾ ಹಿಂದೂ ರಾವ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು” ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಪಿಸಿಆರ್ ಚಾಲಕ ಮತ್ತು ಅವರ ಸಹೋದ್ಯೋಗಿ ಕಾನ್‌ಸ್ಟೆಬಲ್ ಅತುಲ್ ಭಾಟಿ ಶೌಚಾಲಯಕ್ಕೆ ಹೋಗಿದ್ದಾಗ ಹೆಡ್ ಕಾನ್ಟೇಬಲ್ ಇಮ್ರಾನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಲ್ಸಿ ಹೇಳಿದ್ದಾರೆ. ಘಟನೆಯ ಪರಿಶೀಲನೆಗೆ ಜಿಲ್ಲಾ ಅಪರಾಧ ತನಿಖಾ ತಂಡವನ್ನು ಕರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ಇದು ಜಗತ್ತಿನಲ್ಲೇ ಮೊಟ್ಟ ಮೊದಲ ಸುಸಜ್ಜಿತ ಹಾರುವ ಕಾರು..!,ಆಗಸದಲ್ಲಿ ಹಾರುವ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು?

4 ಲಕ್ಷಕ್ಕೆ ಮಗು ಮಾರಾಟ ಮಾಡಿದ 6 ಮಂದಿ ಅರೆಸ್ಟ್..! ನಕಲಿ ಜನನ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳು ವಶಕ್ಕೆ..!

ಉಪ್ಪಿನಂಗಡಿ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮಲಗಿದಲ್ಲೇ ದಿಢೀರ್ ಸಾವು! ಹೃದಯಾಘಾತ ಶಂಕೆ!