ಕರಾವಳಿ

ಹಾಲಿನಲ್ಲಿ ವಿಷ ಬೆರೆಸಿ ತನ್ನಿಬ್ಬರು ಮಕ್ಕಳಿಗೆ ಕುಡಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ :ಒಂದು ಮಗು ಸಾವು,ಮತ್ತೊಂದು ಗಂಭೀರ

ನ್ಯೂಸ್ ನಾಟೌಟ್: ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳಿಗೆ ಇಲಿ ಪಾಷಾಣ ಉಣಿಸಿ, ತಾನು ಸೇವಿಸಿರುವ ಹೃದಯ ವಿದ್ರಾವಕ ಘಟನೆ ಹಾಸನದಲ್ಲಿ ನಡೆದಿದೆ. ತಾಯಿ ಮಾಡಿದ ತಪ್ಪಿಗೆ ಏನೂ ಅರಿಯದ ಕಂದಮ್ಮ ಮೃತಪಟ್ಟಿದೆ. ಮತ್ತೊಂದು ಮಗು ಸಾವು ಬದುಕಿನ ಮಧ್ಯೆ ನರಳಾಡುತ್ತಿದೆ.

ತವರು ಮನೆಯವರು ಬರಲಿಲ್ಲ :


ಮೂರೂವರೆ ವರ್ಷದ ಮೊಹಮ್ಮದ್ ಆರಾನ್ ಮೃತಪಟ್ಟರೆ, 7 ವರ್ಷದ ಮಗಳು ಸುನೈನಾ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ.ಹಾಲಿನಲ್ಲಿ ವಿಷ ಕೊಟ್ಟ ತಾಯಿ ಜೀನತ್ ಭಾನು ಸಹ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತವರು ಮನೆಯವರು ತನ್ನನ್ನು ನೋಡಲು ಬರಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡು ಜೀನತ್ ಭಾನು ಈ ದುಷ್ಕೃತ್ಯ ಎಸಗಿದ್ದಾಳೆ.ಉಪ್ಪಿನಂಗಡಿ ಮೂಲದ ಜೀನತ್ ಭಾನುವನ್ನು ಹಾಸನದ ಚಿಪ್ಪಿನ ಕಟ್ಟೆಗೆ ಮದುವೆ ಮಾಡಿಕೊಡಲಾಗಿತ್ತು. ದಿಲ್‌ದಾರ್ ಎಂಬುವರನ್ನ ಮದುವೆ ಆಗಿ 12 ವರ್ಷ ಆಗಿತ್ತು. ಜ. 7ರಂದು ಸಂಜೆ ತನ್ನ ಮಕ್ಕಳಾದ ಸುನೈನಾ ಹಾಗೂ ಮಹಮ್ಮದ್ ಆರಾನ್‌ಗೆ ಹಾಲಿನಲ್ಲಿ ವಿಷ ನೀಡಿ, ತಾನು ವಿಷ ಸೇವಿಸಿದ್ದಳು.

ಸತ್ಯ ಮುಚ್ಚಿಟ್ಟಿದ್ದ ತಾಯಿ:


ವಿಷ ಉಣಿಸಿದ ಬಳಿಕವೂ ಆ ಸಂಗತಿಯನ್ನು ಜೀನತ್ ಯಾರಿಗೂ ಹೇಳಿರಲಿಲ್ಲ. ಜ.8ರಂದು ಬೆಳಗಿನ ಸಮಯದಲ್ಲಿ ಮಕ್ಕಳು ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡರೂ ಜೀನತ್ ಸತ್ಯ ಮುಚ್ಚಿಟ್ಟಿದ್ದಳು. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಅದೇ ದಿನ ಮಧ್ಯಾಹ್ನ ಮೂರುವರೆ ವರ್ಷದ ಮಹಮ್ಮದ್ ಆರೂನ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆಯಿತು. ಮಗು ಮೃತಪಟ್ಟ ಬಳಿಕ ಜೀನತ್ ಭಾನು ಅಸಲಿ ಸಂಗತಿಯನ್ನು ಕೊನೆಗೂ ವೈದ್ಯರ ಮುಂದೆ ಬಿಚ್ಚಿಟ್ಟಳು. ತವರು ಮನೆಯವರು ತನ್ನನ್ನು ನೋಡಲು ಬರಲಿಲ್ಲ ಎಂಬ ಬೇಸರದಿಂದ ಕೃತ್ಯ ಎಸಗಿದ್ದಾಗಿ ಬಾಯಿಬಿಟ್ಟಿದ್ದಾಳೆ. ಇದೀಗ ಜೀನತ್ ಭಾನು ವಿರುದ್ಧ ಹಾಸನದ ಪೆನ್ಸನ್ ಮೊಹಲ್ಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಸುಬ್ರಹ್ಮಣ್ಯ: ಬಾರೀ ಮಳೆ, ಕೊಲ್ಲಮೊಗ್ರು ಸೇತುವೆ ಜಲಾವೃತ, ಪರದಾಡಿದ ವಾಹನ ಸವಾರರು

ಮೇ.8 ರಂದು ಚಿತ್ರನಟಿ ರಮ್ಯಾ ಪುತ್ತೂರಿಗೆ

ತುಲಾಭಾರದ ವೇಳೆ ತಕ್ಕಡಿ ಕುಸಿದು ಪೇಜಾವರ ಶ್ರೀಗಳಿಗೇನಾಯ್ತು! ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯ 60 ರ ಸಂಭ್ರಮದ ವೇಳೆ ನಡೆಯಿತು ಅವಘಡ! ಇಲ್ಲಿದೆ ಸಂಪೂರ್ಣ ಮಾಹಿತಿ