ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಪರಿಸರದಲ್ಲಿ ಬುಧವಾರ ಸಂಜೆ ಗುಡುಗು ಸಹಿತ ಬಾರೀ ಮಳೆಯಾಗಿದೆ. ಸುಳ್ಯ ತಾಲೂಕಿನ ಕೊಲ್ಲಮೊಗ್ರು ಪರಿಸರದಲ್ಲಿ ಬಾರೀ ಮಳೆಗೆ ಕೊಲ್ಲಮೊಗ್ರು ಕಲ್ಮಕಾರು ರಸ್ತೆಯ ಶಾಲಾ ಬಳಿ ಇರುವ ಸೇತುವೆ ಜಲಾವೃತಗೊಂಡಿತು. ರಸ್ತೆಯಲ್ಲಿ ಕೂಡ ಮಳೆ ನೀರು ಹರಿದಿದೆ. ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಕೆಲ ಹೊತ್ತು ವಾಹಗಳು ರಸ್ತೆಯಲ್ಲೇ ಬಾಕಿಯಾದ ಘಟನೆಯೂ ನಡೆದಿದೆ. ಸುಬ್ರಹ್ಮಣ್ಯ, ಹರಿಹರ, ಐನೆಕಿದು, ಕೊಲ್ಲಮೊಗ್ರು, ಕಲ್ಮಕಾರು, ಪಂಜ, ಯೇನೆಕಲ್ಲು, ಬಳ್ಪ, ಕುಲ್ಕುಂದ, ಬಿಳಿನೆಲೆ, ಕಲ್ಲುಗುಡ್ಡೆ, ಇಚ್ಲಂಪಾಡಿ, ಕೊಣಾಜೆ ಪರಿಸರದಲ್ಲಿಯೂ ಗುಡುಗು ಸಹಿತ ಬಾರೀ ಮಳೆ ಸುರಿದಿದೆ. ರಾತ್ರಿಯೂ ಗುಡುಗು ಸಹಿತ ಬಾರ ಮಳೆಯಾಗಿದೆ.