ಸುಳ್ಯ

ಅಜ್ಜಾವರದಲ್ಲಿ ಗುರುಪೂರ್ಣಿಮೆ ಆಚರಣೆ

ಸುಳ್ಯ: ಅಜ್ಜಾವರದ ಚೈತನ್ಯ ಸೇವಾಶ್ರಮದಲ್ಲಿ ಗುರುಪೂರ್ಣಿಮೆ ಆಚರಣೆ ಹಾಗೂ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 179 ಕೃತಿ ಬಿಡುಗಡೆ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಸಾಯಿ ಗೀತಾ ಅವರು ‘ಮಾನವನ ಜನ್ಮಚಕ್ರ’ ಪುಸ್ತಕವನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು, ‘ಮಾನವ ಆಧುನಿಕ ಕಾಲಚಕ್ರದೊಳಗೆ ಸಿಲುಕಿ ನಮ್ಮ ಸಂಪ್ರದಾಯಗಳನ್ನು ಮೂಢನಂಬಿಕೆ ಎಂದು ತಿಳಿದು ದೂರ ಮಾಡುತ್ತಿದ್ದಾನೆ ,ಇದು ಸಲ್ಲದು, ನಮ್ಮ ನಂಬಿಕೆಗಳಿಗೆ ಪ್ರತಿಯೊಂದಕ್ಕೂ ಅರ್ಥ ಇದ್ದು ಅದರ ಹಿಂದೆ ವೈಜ್ಞಾನಿಕ ಕಾರಣಗಳಿರುತ್ತವೆ’ ಎಂದರು. ಇದೇ ವೇಳೆ ಮಾತನಾಡಿದ ಕಾರ್ಯಕ್ರಮದ ಮತ್ತೋರ್ವ ಅತಿಥಿ ಅಜ್ಜಾವರ ಧನಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್, ‘ಸಮಾಜಕ್ಕೆ ಸಂಸ್ಕಾರ ನೀಡುತ್ತಿರುವ ಸ್ವಾಮಿಗಳ ಸೇವೆ ಇತರರಿಗೆ ಮಾದರಿಯಾಗಿದೆ ಎಂದರು. ಆಶ್ರಮದ ವತಿಯಿಂದ ವಿದ್ಯಾರ್ಥಿಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಸ್ವಾಮಿಗಳು ಗುರುಪೂರ್ಣಿಮೆಯ ಮಹತ್ವದ ಬಗ್ಗೆ ಮಾತನಾಡಿದರು. ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ, ಚಂದ್ರಶೇಖರ ದೊಡ್ಡೇರಿ ಹಾಗೂ ಆಶ್ರಮದ ಟ್ರಸ್ಟಿ ಪ್ರಣವಿ ಉಪಸ್ಥಿತರಿದ್ದರು.

Related posts

ಬಿಜೆಪಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ ಅಡ್ಕಾರ್ ನೇಮಕ

ಅಡ್ಕಾರು: ಹೆಂಡತಿಗೆ ಮಾರಣಾಂತಿಕವಾಗಿ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದ ಗಂಡ ಅರೆಸ್ಟ್..!, ನ್ಯಾಯಾಲಯದ ಮೆಟ್ಟಿಲಲ್ಲಿ ಆತನಿಗೆ ಸಿಕ್ಕಿದ ಶಿಕ್ಷೆಯೇನು..?

ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ 74ನೇ ಗಣರಾಜ್ಯೋತ್ಸವ ದಿನಾಚರಣೆ