ನ್ಯೂಸ್ ನಾಟೌಟ್: ಬೆತ್ತಲೆಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೆಲ್ಲಾ ಯುವಕನೋರ್ವ ಓಡಾಡಿದ ಘಟನೆ ಗೂನಡ್ಕದ ಬಳಿ ಮೇ.5 ರ ಸಂಜೆ ವರದಿಯಾಗಿದೆ.
ಯುವಕ ಸ್ಥಳೀಯರು ಎಷ್ಟು ಹೇಳಿದರೂ ಕೇಳದೆ ಬೆತ್ತಲಾಗಿಯೇ ನಡೆದಾಡಿದ ಎನ್ನಲಾಗಿದ್ದು, ಕೈಯಲ್ಲಿ ಬಟ್ಟೆ ಇದ್ದರೂ ಹಾಕಿಕೊಳ್ಳಲು ನಿರಾಕರಿಸಿದ್ದಾನೆ. ಸ್ಥಳಿಯರು ಅವನಿಗೆ ಬಟ್ಟೆ ಹಾಕುವ ಪ್ರಯತ್ನ ಮಾಡಿದರೂ ಅದು ವಿಫಲವಾಗಿದ್ದು, ಯುವಕನನ್ನು ಮಾನಸಿಕ ಅಸ್ವಸ್ಥನೆಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ.