ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಗನ್‌ ತೊಳೆಯುವ ವಿಡಿಯೋ ಪೊಲೀಸರಿಗೆ ನೀಡಿತ್ತು ಅಕ್ರಮ ಗನ್‌ ತಯಾರಿಕಾ ಜಾಲದ ಸುಳಿವು..! ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆರೋಪಿಗೆ ಆಕ್ಸಿಡೆಂಟ್..!

ನ್ಯೂಸ್ ನಾಟೌಟ್: ಮಹಿಳೆಯೊಬ್ಬರು ಗನ್‌ ತೊಳೆಯುವ ವಿಡಿಯೋ ವೈರಲ್ ಆಗಿತ್ತು, ಈ ವಿಡಿಯೋ ಆಧರಿಸಿ ಅಕ್ರಮ ಗನ್‌ ತಯಾರಿಕ ಜಾಲವನ್ನು ಮಧ್ಯಪ್ರದೇಶ ಪೊಲೀಸರು ಯಶಸ್ವಿ ಭೇದಿಸಿದ್ದಾರೆ.

ಮಹಿಳೆಯೊಬ್ಬರು ಬ್ರಷ್‌ ಹಾಗೂ ನೀರು ಬಳಸಿ ಗನ್‌ಗಳನ್ನು ತೊಳೆಯುತ್ತಿರುವ ವೀಡಿಯೋ ವೈರಲ್‌ ಆಗಿತ್ತು. ಈ ವೀಡಿಯೋದಲ್ಲಿ ಗನ್‌ಗಳು ಹೊಳೆಯುವುದಕ್ಕಾಗಿ ಸೋಪು ಬಳಸುವಂತೆ ಹೇಳುತ್ತಿರುವುದು ರೆಕಾರ್ಡ್‌ ಆಗಿತ್ತು. ಈ ವೀಡಿಯೋ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ಅಕ್ರಮ ಗನ್‌ ತಯಾರಿಕ ಜಾಲವನ್ನು ಭೇದಿಸಿದ್ದಾರೆ.

ವೀಡಿಯೋ ಚಿತ್ರೀಕರಿಸಿದ ಲೊಕೇಶನ್‌ ಪತ್ತೆ ಹಚ್ಚಿ, ಪೊಲೀಸರು ತೆರಳುವಷ್ಟರಲ್ಲಿ ಆರೋಪಿ ಶಕ್ತಿ ಕಪೂರ್‌ ತನ್ನ ತಂದೆಯೊಂದಿಗೆ ದ್ವಿಚಕ್ರ ವಾಹನದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಅಪಘಾತಕ್ಕೀಡಾಗಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ಮನೆಯಲ್ಲಿ ಪೊಲೀಸರು ಡಬಲ್‌ ಬ್ಯಾರಲ್‌ ಗನ್‌, ಪಿಸ್ತೂಲು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗನ್‌ ತಯಾರಿಗೆ ಎಲ್ಲಿಂದ ಕಚ್ಚಾವಸ್ತು ಖರೀದಿಸಿದ್ದ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Click

https://newsnotout.com/2024/08/fake-family-and-marriage-scam-kannada-news-suspence-story/
https://newsnotout.com/2024/08/moodabidre-student-kannada-news-accued-arrested-news/
https://newsnotout.com/2024/08/chamundi-betta-mysore-kannada-news-state-govt-interfere-court-stayfe/
https://newsnotout.com/2024/08/kerala-bank-donates-50-lakh-to-wayanad-and-loans-taken-by-that-accused-are-releaf/
https://newsnotout.com/2024/08/missing-from-10-year-and-found-in-bangladesh-boarder-a-maths-teacher/

Related posts

ಕರ್ನಾಟಕದ ಐಪಿಎಸ್ ಅಧಿಕಾರಿ ತಮಿಳ್ ನಾಡಲ್ಲಿ ಅರೆಸ್ಟ್ ಆಗಿದ್ದೇಕೆ..? ಇಲ್ಲಿದೆ ಪೊಲೀಸರ ನಡುವಿನ ಹೊಡೆದಾಟದ ಕಥೆ..!

ಕೇದಾರನಾಥಕ್ಕೆ ಭಕ್ತರನ್ನು ಕರೆದೊಯ್ಯೊ ಕುದುರೆಗೆ ಬಲವಂತವಾಗಿ ಧೂಮಪಾನ ಮಾಡಿಸಿದ ಕ್ರೂರಿಗಳು! ಇಬ್ಬರ ವಿರುದ್ಧ ಎಫ್ಐಆರ್, ಇಲ್ಲಿದೆ ವಿಡಿಯೋ

7 ವರ್ಷದ ಬಳಿಕ ಭಾರತಕ್ಕೆ ಬಂದ ಪಾಕ್ ಕ್ರಿಕೆಟಿಗರಿಗೆ ‘ಕೇಸರಿ’ ಶಾಲು ಹಾಕಿ ಸ್ವಾಗತಿಸಿದ ಭಾರತ..! ಪಾಕ್ ಸೇರಿದಂತೆ ವಿಶ್ವಕಪ್ ಆಡಲು ಬರುವ 10 ತಂಡದ ಆಟಗಾರರಿಗೆ ಗೋಮಾಂಸ ಕೊಡಲ್ಲ..!