ಕ್ರೈಂದೇಶ-ಪ್ರಪಂಚ

ಗುಜರಾತ್ : ಪ್ರಶ್ನೆ ಪತ್ರಿಕೆ ಸೋರಿಕೆ, ಪಂಚಾಯತ್ ಸೇವಾ ಆಯ್ಕೆ ಮಂಡಳಿಯ ಗುಮಾಸ್ತ ನೇಮಕಾತಿ ಪರೀಕ್ಷೆ ರದ್ದು

ನ್ಯೂಸ್ ನಾಟೌಟ್ : ಪಂಚಾಯತ್ ಸೇವಾ ಆಯ್ಕೆ ಮಂಡಳಿಯ ಕಿರಿಯ ಗುಮಾಸ್ತರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ರದ್ದು ಮಾಡಲಾಗಿದೆ, ಎಂದು ಗುಜರಾತ್ ಪಂಚಾಯತ್ ಸೇವಾ ಆಯ್ಕೆ ಮಂಡಳಿ ಕಾರ್ಯದರ್ಶಿಗಳು ಜ. ೨೯ ಭಾನುವಾರ ಪ್ರಕಟಣೆ ಮಾಡಿದ್ದಾರೆ.

ಇಂದು ಬೆಳಗ್ಗೆ ೧೧ ಗಂಟೆಗೆ ನಡೆಯಬೇಕಿದ್ದ ಕಿರಿಯ ಗುಮಾಸ್ತ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಯುವರಾಜ್ ಸಿನ್ಹ ಜಡೇಜ ಶನಿವಾರ ರಾತ್ರಿ ಕಛೇರಿಯೊಳಗೆ ನುಗ್ಗಿ ಪರೀಕ್ಷಾ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾನೆ ಎನ್ನಲಾಗಿದೆ.

ಗುಜರಾತ್ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ. ಇದರಿಂದ ಲಕ್ಷಾಂತರ ನಿರುದ್ಯೋಗಿ ಯುವಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಮುಂದಿನ ಪರೀಕ್ಷಾ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ.

Related posts

ಆ್ಯಂಬುಲೆನ್ಸ್‌ಗೆ ಕೊಡಲು ಹಣವಿಲ್ಲದೆ ಮಗಳ ಶವವನ್ನು ಬೈಕ್‌ನಲ್ಲೇ ಸಾಗಿಸಿದ ತಂದೆ…!

ಕಲ್ಲುಗುಂಡಿ: ಸೇತುವೆಗೆ ಗುದ್ದಿದ ಕಾರು, ಮೂವರಿಗೆ ಗಂಭೀರ ಗಾಯ

ಬಂಡೆ ಕುಸಿತ.. 300 ಮಂದಿಯ ಜೀವನ್ಮರಣ ಹೋರಾಟ..! ಏನಿದು ಅನಾಹುತ?