ಕ್ರೈಂಬೆಂಗಳೂರುರಾಜಕೀಯರಾಜ್ಯವೈರಲ್ ನ್ಯೂಸ್

ಪಂಚೆ ಧರಿಸಿ ಬಂದ ರೈತನನ್ನು ಒಳಬಿಡದ ಜಿ.ಟಿ.ಮಾಲ್ ಗೆ 7 ದಿನ ಬೀಗ..! ಸದನದಲ್ಲಿ ಸಚಿವ ಭೈರತಿ ಸುರೇಶ್ ಘೋಷಣೆ..!

ನ್ಯೂಸ್ ನಾಟೌಟ್: 60 ವರ್ಷ ವಯಸ್ಸಿನ ಫಕೀರಪ್ಪ ಎಂಬ ರೈತರು ಸಾಂಪ್ರದಾಯಿಕ ಪಂಚೆ ಧರಿಸಿ ಬಂದಿದ್ದರು ಎಂಬ ಕಾರಣಕ್ಕೆ ಒಳಗೆ ಬಿಡದೆ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಜಿ ಟಿ ಮಾಲ್ ಗೆ 7 ದಿನ ಬೀಗ ಜಡಿಯಲಾಗಿದೆ.

ವ್ಯಕ್ತಿಯ ಬಟ್ಟೆ ನೋಡಿ ಅವಮಾನಿಸಿದ ಜಿ ಟಿ ಮಾಲ್ ಗೆ ಏಳು ದಿನ ಬೀಗ ಜಡಿಯಲಾಗುವುದು. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಮಾತನಾಡಿದ್ದೇವೆ. ಕಾನೂನಿನಲ್ಲಿ ಶಿಕ್ಷೆಗೆ ಅವಕಾಶವಿದೆ ಎಂದಿದ್ದಾರೆ. ಹೀಗಾಗಿ ಮಾಲ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.

ಇಂದು(ಜು.18) ಬೆಳಗ್ಗೆ ಸದನದಲ್ಲಿ ಜಿ.ಟಿ ಮಾಲ್ ನಲ್ಲಿ ರೈತನಿಗೆ ಅವಮಾನ ಆದ ವಿಚಾರ ಚರ್ಚೆಗೆ ಕಾರಣವಾಯ್ತು. ಜಿಟಿ ಮಾಲ್ ಒಳಗೆ ಪಂಚೆ ಉಟ್ಟ ರೈತನನ್ನ ಬಿಡದೆ ಅವಮಾನಿಸಿದ ವಿಚಾರವಾಗಿ ಸ್ಪೀಕರ್ ಯು.ಟಿ.ಖಾದರ್ ಗರಂ ಆದರು. ಅವನು ಎಷ್ಟೇ ದೊಡ್ಡವನು ಇರಲಿ, ಅವನಿಗೆ ತೋರಿಸಬೇಕು. ಅವಮಾನ ಮಾಡಿದ್ದನ್ನು ಖಂಡಿಸಬೇಕು. ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದಿದ್ದಾರೆ. ದೇವೇಗೌಡರು, ಸಿದ್ದರಾಮಯ್ಯ ಅವರು ಪಂಚೆ ಉಡ್ತಾರೆ, ಅವರು ಕ್ಲಬ್ ಗಳಿಗೆ ಏನಾದ್ರೂ ಹೋದರೆ ಬಿಡ್ತಾರೆ. ಆದರೆ, ಬೇರೆಯವರಿಗೆ ಆ ರೂಲ್ಸ್ ಇಲ್ವಾ ಎಂದು ಸಚಿವ ಬೈರತಿ ಸುರೇಶ್ ಪ್ರಶ್ನಿಸಿದರು. ಅಲ್ಲದೆ, ಸಚಿವ ಬೈರತಿ ಸುರೇಶ್, 7 ದಿನಗಳ ಕಾಲ‌ ಮಾಲ್ ಮುಚ್ಚಿಸುತ್ತೇವೆ ಎಂದಿದ್ದಾರೆ.

Click 👇

https://newsnotout.com/2024/07/urvashi-rautela-video-leak-issue-kananda-news-the-clarification-on-the-incident/
https://newsnotout.com/2024/07/netravathi-river-kannada-news-6-families-under-issue-farmers-of-areca/
https://newsnotout.com/2024/07/darshan-case-issue-about-food-in-jail-high-court-order-kannada-news/
https://newsnotout.com/2024/07/america-president-kannada-news-covid-possitive-kannada-news-health/
https://newsnotout.com/2024/07/uppinangady-ksrtc-iravata-fire-kannada-news-ac-problem/

Related posts

ಮನೆಯವರಿಂದಲೇ ವಧುವಿನ ಅಪಹರಣ..? ಇಲ್ಲಿದೆ ವೈರಲ್ ವಿಡಿಯೋ

ಬೀದಿ ನಾಯಿಗಳು ಕಣ್ಮರೆಯಾದದ್ದಕ್ಕೆ ಪೊಲೀಸ್ ಠಾಣಾ ಮೆಟ್ಟಿಲೇರಿದ ಈ ವ್ಯಕ್ತಿ ಯಾರು? ಇಲ್ಲಿದೆ ಪ್ರಾಣಿ ಪ್ರೇಮಿಯ ಕಣ್ಣೀರ ಕಥೆ

ಕುಡಿದ ನಶೆಯಲ್ಲಿ ಡಯಾಲಿಸಿಸ್‌ ಮಾಡಿದ್ರಾ ಆಸ್ಪತ್ರೆ ಸಿಬ್ಬಂದಿ? ಮಹಿಳೆಯ ದುರಂತ ಅಂತ್ಯ ಕಂಡು ಗೋಳಾಡಿದ ಪೋಷಕರು! ಇಲ್ಲಿದೆ ಕಣ್ಣೀರ ಕಥೆ