ಕ್ರೈಂದೇಶ-ಪ್ರಪಂಚ

ಟ್ಯಾಂಕ್‌ ಸ್ವಚ್ಛಗೊಳಿಸಲು ಒಳಹೋದ ಕಾರ್ಮಿಕ ವಾಪಸಾಗದೇ ಇದ್ದಾಗ ಇನ್ನೊಬ್ಬ ಹೋಗಿದ್ದ ಆತನೂ ವಾಪಸಾಗದೇ ಇದ್ದಾಗ ಉಳಿದಿಬ್ಬರು ಹೋಗಿದ್ದರು! ಮುಂದೇನಾಯ್ತು..?

ನ್ಯೂಸ್ ನಾಟೌಟ್: ಪಂಜಾಬ್‌ ರಾಜ್ಯದ ಡೇರಾ ಬಸ್ಸಿ ಎಂಬಲ್ಲಿರುವ ಫೆಡರಲ್‌ ಮೀಟ್  ಪ್ಲಾಂಟ್‌ನಲ್ಲಿನ ಗ್ರೀಸ್‌ ಟ್ಯಾಂಕ್‌ ಅನ್ನು ಸ್ವಚ್ಛಗೊಳಿಸುವ ವೇಳೆ ನಾಲ್ವರು ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಈ ದುರಂತ ಶುಕ್ರವಾರ ಅಪರಾಹ್ನ ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಕಾರ್ಮಿಕರು ಒಬ್ಬರ ಹಿಂದೆ ಒಬ್ಬರು ಟ್ಯಾಂಕ್‌ ಪ್ರವೇಶಿಸಿದ್ದು ವಿಷಗಾಳಿ ಸೇವನೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಒಬ್ಬ ಕಾರ್ಮಿಕನನ್ನು ಸ್ಥಳೀಯರು ರಕ್ಷಿಸಿದ್ದಾರೆ.

“ಮೊದಲು ಒಳಕ್ಕೆ ಹೋದ ಕಾರ್ಮಿಕ ವಾಪಸಾಗದೇ ಇದ್ದಾಗ ಇನ್ನೊಬ್ಬ ಹೋಗಿದ್ದ. ಆತನೂ ವಾಪಸಾಗದೇ ಇದ್ದಾಗ ಉಳಿದಿಬ್ಬರು ಹೋಗಿದ್ದರು. ಅವರು ಕೂಡ ವಾಪಸಾಗದೇ ಇದ್ದುದನ್ನು ಗಮನಿಸಿ ನಾನು ಕೂಡ ಹೋಗಿ ಅಲ್ಲಿ ತಲೆತಿರುಗಿ ಬಿದ್ದುಬಿಟ್ಟೆ, ನಂತರ ನನ್ನನ್ನು ರಕ್ಷಿಸಲಾಯಿತು” ಎಂದು ಈ ದುರಂತದಲ್ಲಿ ಬದುಕುಳಿದ ಕಾರ್ಮಿಕ ಹೇಳಿಕೊಂಡಿದ್ದಾನೆ.

ಮೃತರನ್ನು ಮಾನಕ್‌, ಶ್ರೀಧರ್‌ ಪಾಂಡೆ, ಕುರ್ಬಾನ್‌ ಮತ್ತು ಜನಕ್‌ ಎಂದು ಗುರುತಿಸಲಾಗಿದ್ದು, ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಮಹಡಿ ಮೇಲಿಂದ ಬಿದ್ದು 9ನೇ ತರಗತಿ ವಿದ್ಯಾರ್ಥಿನಿ ದಾರುಣ ಸಾವು!

ಮರ್ಕಂಜ: ನಾಪತ್ತೆಯಾಗಿರುವ ವಿವಾಹಿತ ಮಹಿಳೆಗಾಗಿ ಬಾವಿಯೊಳಗೆ ಬಿದ್ದಿರುವ ಮಣ್ಣು ಅಗೆದು ಹುಡುಕಾಟ, ತರ್ಕಕ್ಕೆ ನಿಲುಕದ ಗೃಹಿಣಿಯ ನಿಗೂಢ ನಾಪತ್ತೆ ಪ್ರಕರಣ

ವೀಲ್ಹಿಂಗ್ ಮಾಡಿ ರಾತ್ರಿ ಜಲಮಂಡಳಿ ಗುಂಡಿಗೆ ಬಿದ್ದ ಯುವಕರು..! ಓರ್ವ ಸಾವು, ಇಬ್ಬರ ಸ್ಥಿತಿ ಗಂಭೀರ..!