ಕರಾವಳಿ

ಗೋಳಿತ್ತೊಟ್ಟು:ಕುಡಿದು ಸರ್ಕಾರಿ ಬಸ್​ನಲ್ಲೇ ಬಿದ್ದ ಗ್ರಾಮಕರಣಿಕ..! ಕುಡುಕನನ್ನು ಕಂಡು ಬಸ್​ ಚಾಲಕ ಏನು ಮಾಡಿದ್ರು ಗೊತ್ತಾ?

ನ್ಯೂಸ್‌ ನಾಟೌಟ್‌ : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲೇ ಗ್ರಾಮಕರಣಿಕ ಬಿದ್ದಿರೋ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನಡೆದಿದೆ.ಕುಡಿದ ಮತ್ತಿನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಕಡಬ ತಾಲೂಕಿನ ಗೋಳಿತೊಟ್ಟುವಿನ ಗ್ರಾಮಕರಣಿಕನ ಈ ಅವಾಂತರಕ್ಕೆ ಬಸ್​​ ಚಾಲಕ ಬಸ್​ ಅನ್ನ ನೇರವಾಗಿ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿರುವ ಪ್ರಸಂಗ ನಡೆದಿದೆ.

ನಾಗಸುಂದರನ ಈ ಅವಾಂತರ ಸೃಷ್ಟಿಸಿರುವ ವ್ಯಕ್ತಿ ಎಂದು ಹೇಳಲಾಗಿದ್ದು,ಈ ಹಿಂದೆಯು ನಾಗಸುಂದರ ಹಲವು ಬಾರಿ ಮದ್ಯಪಾನ ಮಾಡಿ ಬಿದ್ದಿದ್ರು ಎಂದು ಹೇಳಲಾಗಿದ್ದು, ನಾಗಸುಂದರನ ಮದ್ಯಪಾನದ ಚಟದ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ಸದ್ಯ ನಿನ್ನೆ ನಡೆದ ಅವಾಂತರದ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ. ನಾಗಸುಂದರನ ಮೇಲೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಕೂಡ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Related posts

Belthangady: ಸಾವಿರಾರು ಕನಸು ಕಂಡಿದ್ದ ಪ್ರತಿಭಾವಂತ ಕಬಡ್ಡಿ ಆಟಗಾರನ ಬದುಕು ದುರಂತ ಅಂತ್ಯ ಕಂಡಿದ್ದು ಹೇಗೆ..? ಕಣ್ಣೀರಾದ ಸ್ನೇಹಿತ ವರ್ಗ

ಉಡುಪಿ: ಜಲಪಾತದಲ್ಲಿ ಬಿದ್ದು ಕಣ್ಮರೆಯಾಗಿದ್ದ ಯುವಕನ ಶವ ವಾರದ ಬಳಿಕ ಪತ್ತೆ

ಕೇರಳದಲ್ಲಿ ಮುಂದುವರಿದ ನಿಫಾ ವೈರಸ್‌ ಹಾವಳಿ, ಮಾರಕ ರೋಗಕ್ಕೆ ಇಬ್ಬರು ಬಲಿ, ವಿವಿಧೆಡೆ ಕಂಟೈನ್‌ಮೆಂಟ್ ವಲಯಗಳನ್ನಾಗಿ ಘೋಷಣೆ, ಕರಾವಳಿಗೆ ಆತಂಕ..!