ಕ್ರೈಂದೇಶ-ವಿದೇಶ

ಸರ್ಕಾರಿ ಶಾಲೆಗೆ ಕುಡಿದು ಬಂದ ಪ್ರಾಂಶುಪಾಲ ಮತ್ತು ಶಿಕ್ಷಕನ ಬಂಧನ..! ನಶೆ ಹೆಚ್ಚಾಗಿ ರಸ್ತೆಯಲ್ಲೇ ಬಿದ್ದು ಒದ್ದಾಡಿದ ಶಿಕ್ಷಕ..!

ನ್ಯೂಸ್‌ ನಾಟೌಟ್: ಮದ್ಯಪಾನ ಮಾಡಿ ಶಾಲೆಗೆ ಬಂದು ರಂಪಾಟ ಮಾಡಿದ್ದಲ್ಲದೆ ರಸ್ತೆಯಲ್ಲಿ ಬಿದ್ದುಕೊಂಡಿದ್ದ ಬಿಹಾರದ ನಳಂದ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲ ಮತ್ತು ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.

ಸರ್ಕಾರಿ ಶಾಲೆಯ ಪ್ರಾಂಶುಪಾಲ ನಾಗೇಂದ್ರ ಪ್ರಸಾದ್ ಮತ್ತು ಶಿಕ್ಷಕ ಸುಬೋಧ್ ಕುಮಾರ್ ಬಂಧಿತರು ಎಂದು ಗುರುತಿಸಲಾಗಿದೆ. ಇವರಿಬ್ಬರು ಮದ್ಯಪಾನ ಮಾಡಿ ಶಾಲೆಗೆ ಬಂದಿದ್ದು, ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಇಬ್ಬರು ಶಿಕ್ಷಕರು ದುರ್ವರ್ತನೆ ತೋರುವುದನ್ನು ಗಮನಿಸಿದ ಗ್ರಾಮಸ್ಥರು ಶಾಲೆಗೆ ಬಂದು ಪ್ರಶ್ನಿಸಿದ್ದಾರೆ. ಈ ವೇಳೆ ಶಿಕ್ಷಕರು ಗ್ರಾಮಸ್ಥರನ್ನು ನಿಂದಿಸಿದ್ದಾರೆ.

ನಶೆ ಹೆಚ್ಚಾಗಿ ಓರ್ವ ಶಿಕ್ಷಕ ನಡೆದಾಡಲು ಸಾಧ್ಯವಾಗದೆ ರಸ್ತೆಯಲ್ಲಿ ಬಿದ್ದುಕೊಂಡಿದ್ದಾರೆ. ಬಳಿಕ ಪೊಲೀಸರು ಬಂದು ಅವರನ್ನು ವ್ಯಾನ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಸಾದ್ ಮತ್ತು ಕುಮಾರ್ ಎಂಬವರನ್ನು ಬಂಧಿಸಲಾಗಿದ್ದು, ಅವರು ಮದ್ಯಪಾನ ಮಾಡಿದ್ದರು ಎನ್ನುವುದನ್ನು ಪೊಲೀಸರು ದೃಢಪಡಿಸಿದ್ದಾರೆ.

Click

https://newsnotout.com/2024/11/kasaragodu-family-issue-women-police-nomore-by-husband-kannada-news-fn/
https://newsnotout.com/2024/11/darshan-thugudeepa-kannada-news-highcourt-lawyer-kannada-news-d/
https://newsnotout.com/2024/11/bus-car-lorry-rayachur-kannada-news-bengaluru-viral-news-d/
https://newsnotout.com/2024/11/marriage-function-kannada-news-viral-video-bengaluru/

Related posts

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟಕ್ಕೆ ಪಾಕಿಸ್ಥಾನದ ಐಎಸ್ಐ ಲಿಂಕ್ ..! ಉಗ್ರ ಶಾರಿಕ್‌ಗೆ ಸಿಮ್‌, ಮೊಬೈಲ್‌ ನೀಡಿದ ಆರೋಪಿ ಒಡಿಶಾದಲ್ಲಿ ಸೆರೆ

ಕುಕ್ಕರ್, ಸೀರೆ ಕಂಡರೆ ಬೆಂಕಿ ಹಚ್ಚಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಹೇಳಿದ ಹೆಚ್.ಡಿ.ಕೆ..! ಗ್ರಾಮಗಳಿಗೆ ಪ್ಯಾರಾ ಮಿಲಿಟರಿ ಪೋರ್ಸ್ ತರಲು ಹೇಳುತ್ತೇನೆ ಎಂದ ಮಾಜಿ ಮುಖ್ಯಮಂತ್ರಿ..!

ನಾಳೆ(ಮೇ.10)ಯಿಂದ ಕೇದಾರನಾಥ ದರ್ಶನ ಪ್ರಾರಂಭ, ಇಲ್ಲಿದೆ ಸಂಪೂರ್ಣ ಮಾಹಿತಿ