ನ್ಯೂಸ್ ನಾಟೌಟ್ : ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳಲ್ಲಿ ಮಾತಾಡೋದೇ ಕಷ್ಟ.ಊಟ ಕೊಟ್ರೆ ಅದು ಇದು ಬೇಕು ಎಂದು ಇಷ್ಟುದ್ದ ಪಟ್ಟಿ ಹೇಳ್ತಾರೆ.ಹೀಗಾಗಿ ಈಗಿನ ಮಕ್ಕಳ ಡಿಮ್ಯಾಂಡ್ ಕೇಳಿದ್ರೆ ಒಮ್ಮೊಮ್ಮೆ ಆಶ್ಚರ್ಯದ ಜತೆಗೆ ಶಾಕ್ ಕೂಡ ಆಗುತ್ತೆ. ಆಗ ನಮ್ಮ ಕಾಲದಲ್ಲಿ ಈ ಫೆಸಿಲಿಟಿ ಇರಲಿಲ್ಲ, ಹಾಗಿರ್ಲಿಲ್ಲ, ಹೀಗಿರ್ಲಿಲ್ಲ ಅಂತ ನಮ್ಮ ಕಥೆ ಹೇಳಿದ್ರೆ, ಮಕ್ಕಳು ಅದಕ್ಕೆ ಬೇರೆಯದ್ದೇ ಉತ್ತರ ಕೊಡುತ್ತಾರೆ.ಕೊನೆಗೆ ಉಪಾಯವಿಲ್ಲದೇ ಅವರ ಡಿಮ್ಯಾಂಡ್ಗೆ ತಲೆ ಬಾಗ್ತೇವೆ.ಇದೀಗ ಅಂಗನವಾಡಿಯಲ್ಲಿ ಪುಟ್ಟ ಬಾಲಕನೋರ್ವ ಸರ್ಕಾರಕ್ಕೆ ಸ್ಪೆಶಲ್ ಮನವಿ ಮಾಡಿದ್ದಾನೆ. ನಂಗೆ ಉಪ್ಪಿಟ್ಟು ಬದಲಿಗೆ ಬಿರಿಯಾನಿ , ಚಿಕನ್ ಫ್ರೈ ಬೇಕು ಅಂತ ಕೇಳಿದ್ದಾನೆ.ವಿಶೇಷವೆಂದ್ರೆ ಈತನ ಮನವಿಗೆ ಕೇರಳದ ಆರೋಗ್ಯ ಸಚಿವರೇ ಒಪ್ಪಿಗೆ ಸೂಚಿಸಿದ್ದಾರಂತೆ..
ಕೇರಳದ ಆರೋಗ್ಯ ಸಚಿವೆಯಾಗಿರುವ ವೀಣಾ ಜಾರ್ಜ್ ಒಪ್ಪಿಗೆ ಸೂಚಿಸಿದವರು.ಊಟದ ಮೆನುವಿನಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಚಿಕನ್ ಫ್ರೈ ನೀಡಬೇಕು ಎಂದು ಪುಟ್ಟ ಬಾಲಕ ಮನವಿ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೀಡಿಯೋಗೆ ಸಚಿವರು ಸ್ಪಂದಿಸಿದ್ದಾರೆ. ಅಂಗನವಾಡಿಗಳಲ್ಲಿನ ಆಹಾರ ಮೆನುವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಯಾರು ಆ ಬಾಲಕ?
ಶಂಕು ಎಂಬ ಮಗು ಮುಗ್ಧ ರೀತಿಯಲ್ಲಿ ತನ್ನ ಅಂಗನವಾಡಿಯಲ್ಲಿ ರುಚಿಕರ ಊಟ ಬೇಕು ಎಂದು ಕೇಳಿ ಕೊಂಡಿದ್ದಾನೆ. ಇದು ಸಚಿವರ ಮನಸ್ಸು ಕರಗೋ ಹಾಗೆ ಮಾಡಿತ್ತೋ ಏನೋ.. ಜ.30 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಹರಿಬಿಟ್ಟಿದ್ದು, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ವೀಡಿಯೋ ಕೊನೆಗೂ ಸಚಿವರ ಗಮನಕ್ಕೆ ಬಂದಿದೆ.ಕೇರಳದಲ್ಲಿ ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲು ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಪೋಷಣೆಗೆ ಪೂರಕವಾಗಿ ಊಟ ನೀಡಲಾಗುತ್ತಿದೆ. ಮೊಟ್ಟೆ ಮತ್ತು ಹಾಲನ್ನು ಸಹ ಸರ್ಕಾರ ನೀಡುತ್ತಿದೆ. ಮಕ್ಕಳು ಪೌಷ್ಟಿಕ ಆಹಾರದಿಂದ ಆರೋಗ್ಯದ ಪ್ರಯೋಜನ ಪಡೆಯಲು ಸಹಕಾರಿಯಾಗಿದೆ.