ದೇಶ-ಪ್ರಪಂಚ

ಗರ್ಭಕೋಶ ಕ್ಯಾನ್ಸರ್ ತಡೆ ಲಸಿಕೆ ಖರೀದಿಗೆ ಮುಂದಾದ ಕೇಂದ್ರ ಸರಕಾರ

ನ್ಯೂಸ್ ನಾಟೌಟ್: ಬಾಲಕಿಯರಿಗೆ ಸಿಹಿ ಸುದ್ದಿಯೊಂದನ್ನು ಕೇಂದ್ರ ಸರಕಾರ ಶೀಘ್ರದಲ್ಲೇ ನೀಡಲಿದೆ. ಮಹಿಳೆಯರಿಗೆ ಉಂಟಾಗುವ ಗರ್ಭಕೋಶ ಕ್ಯಾನ್ಸರ್ ತಡೆಗಟ್ಟಲು ಲಸಿಕೆ ತಯಾರಿಸಲಾಗಿದ್ದು ಅದನ್ನು ಖರೀದಿಗೆ ಕೇಂದ್ರ ಸರಕಾರ ಮುಂದಾಗಿದೆ. ಎಚ್‌ಪಿವಿ ಲಸಿಕೆ ಖರೀದಿಗೆ ಈ ಸಂಬಂಧ ಏಪ್ರಿಲ್‌ನಲ್ಲಿ ಜಾಗತಿಕ ಟೆಂಡರ್‌ ಆಹ್ವಾನಿಸಲು ನಿರ್ಧರಿಸಲಾಗಿದೆ.

16.02 ಕೋಟಿ ಲಸಿಕೆ ಗುರಿ

2026ರ ವೇಳೆಗೆ, ಲಸಿಕೆಯ 16.02 ಕೋಟಿಯಷ್ಟು ಡೋಸ್‌ಗಳು ಜನರಿ್ಎ ಲಭ್ಯವಾಗಬೇಕು. ಹೀಗಾಗಿ, ಜಾಗತಿಕ ಟೆಂಡರ್‌ ಕರೆಯಲು ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ (ಎಸ್‌ಐಐ) ಅಲ್ಲದೇ, ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಮೆರ್ಕ್‌ ಕಂಪನಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ. 9ರಿಂದ 14 ವರ್ಷ ವಯೋಮಾನದ ಬಾಲಕಿಯರಿಗೆ ಈ ಲಸಿಕೆ ನೀಡಲಾಗುತ್ತದೆ. ಅಲ್ಲದೇ, ಈ ಲಸಿಕೆಯನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸಲಾಗಿದ್ದು, ಬರುವ ಜೂನ್‌ನಲ್ಲಿ ಲಸಿಕೆ ನೀಡಿಕೆಗೆ ಚಾಲನೆ ನೀಡಲಾಗುತ್ತದೆ. ಎಸ್‌ಐಐ ಉತ್ಪಾದಿಸುವ ಎಚ್‌ಪಿವಿ ಲಸಿಕೆ ‘ಸರ್ವಾವ್ಯಾಕ್‌’ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಜ.24ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.

Related posts

ಕಲ್ಲಂಗಡಿ ಹಣ್ಣಿನ ಮೇಲಿರುವ ಧೂಳು ಒರೆಸಲು ರಾಷ್ಟ್ರಧ್ವಜ ಬಳಕೆ,ಆಘಾತಕಾರಿ ಘಟನೆಯ ವಿಡಿಯೋ ವೈರಲ್,ತನಿಖೆ ಚುರುಕು…

‘ಶೀಘ್ರದಲ್ಲೇ ಪುಲ್ವಾಮಾ ಮಾದರಿ ದಾಳಿ ನಡೆಯಲಿದೆ’ ಎಂದು ಪೋಸ್ಟ್ ಹಂಚಿಕೊಂಡದ್ದೇಕೆ ಆ ವಿದ್ಯಾರ್ಥಿ? ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಬಂಧಿಸಿದ ಆ ಮೂವರು ಯಾರು?

ಸಿಕ್ಕಿಂನಲ್ಲಿ ಭೀಕರ ಮೇಘಸ್ಫೋಟ; ದಿಢೀರ್‌ ಪ್ರವಾಹದಿಂದ 23 ಯೋಧರು ಕಣ್ಮರೆ