Uncategorized

ಸರ್ಕಾರಿ ನೌಕರರ ಮುಷ್ಕರ:ಬಹುತೇಕ ಸರಕಾರಿ ಕಚೇರಿಗಳು ಬಂದ್

ನ್ಯೂಸ್ ನಾಟೌಟ್ : 7ನೇ ವೇತನ ಆಯೋಗದ ವರದಿ ಜಾರಿಗಾಗಿ ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದಾರೆ.ಹೀಗಾಗಿ ಇಂದಿನಿಂದ ತಮ್ಮ ಹಲವು ಬೇಡಿಕೆಯನ್ನ ಸರರ್ಕಾರದ ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಸರ್ಕಾರಿ ನೌಕರರ ಮುಷ್ಕರದಿಂದಾಗಿ ಹಲವು ಸೇವೆಗಳು ಸ್ಥಗಿತಗೊಂಡಿದ್ದು, ಸರ್ಕಾರಿ ಬಸ್ ಸೇವೆ, ತುರ್ತು ಆರೋಗ್ಯ ಸೇವೆ, ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆ ಮತ್ತು ಐಸಿಯು ಸೇವೆ ಇರಲಿದೆ.

ಅನಿರ್ದಿಷ್ಟಾವಧಿ ಮುಷ್ಕರದ ಪರಿಣಾಮ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳು ಇಂದು ಸ್ತಭ್ದಗೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಷ್ಕರದ ಬಿಸಿ ತಟ್ಟಿದ್ದು, ಮುಷ್ಕರದ ಮೊದಲ ದಿನದಂದೇ ಜನಸಾಮಾನ್ಯರಿಗೆ ಸರ್ಕಾರಿ ಸೇವೆ ಬಹುತೇಕ ಅಲಭ್ಯವಾಗಿತ್ತು ಎಂದು ತಿಳಿದು ಬಂದಿದೆ.ಸರ್ಕಾರಿ ಸೇವೆಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜು ಶಿಕ್ಷಕರು ಕೂಡಾ ಬಂದ್‌ಗೆ ಕೈ ಜೋಡಿಸಿದ್ದು, ಇಂದು ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳು ಬಂದ್ ಆಗಿದೆ. ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಪದವಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಮಂಗಳೂರು ವಿವಿ ಕುಲಸಚಿವ (ಆಡಳಿತ) ಪ್ರೊ. ಕಿಶೋರ್‌ಕುಮಾರ್ ಸಿ.ಕೆ. ತಿಳಿಸಿದ್ದಾರೆ.

Related posts

ಚಲಿಸುತ್ತಿರುವ ರೈಲಿನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಸಾವನ್ನಪ್ಪಿದ ಬಾಲಕ..! ಇಲ್ಲಿದೆ ವೈರಲ್ ವಿಡಿಯೋ

ಹಿಂದೂ ದೇಗುಲಕ್ಕೆ ಭೂಮಿ ದಾನ ಮಾಡಿದ ಮುಸ್ಲಿಂ ವ್ಯಕ್ತಿ

ಮಲಯಾಳಂ ನಟ ಶ್ರೀಜಿತ್ ರವಿ ಬಂಧನ