ಕರಾವಳಿಸುಳ್ಯ

ಗೂನಡ್ಕ:ಯಮರೂಪದಲ್ಲಿ ಬಂದ ಸ್ಕೂಟಿ,ಪಾದಚಾರಿ ಮೃತ್ಯು

ನ್ಯೂಸ್ ನಾಟೌಟ್: ಅಪರಿಚಿತ ವ್ಯಕ್ತಿಗೆ ಬೈಕ್ ಗುದ್ದಿ ಮೃತ ಪಟ್ಟ ಘಟನೆ ಕಲ್ಲುಗುಂಡಿಯ ಗೂನಡ್ಕ ಕಡೆಪಾಲ ಬಳಿ ನಡೆದಿದೆ.ಅಪರಿಚಿತ ವ್ಯಕ್ತಿ ಮಾಹಿತಿ ಲಭ್ಯವಾಗಿಲ್ಲ ಕಲ್ಲುಗುಂಡಿ ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಕಳೆದ 4 ದಿನಗಳಿಂದ ಕಲ್ಲುಗುಂಡಿ ಆರಂತೋಡು ಪರಿಸರದಲ್ಲಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿ ಇಂದು ಯಮರೂಪದಲ್ಲಿ ಬಂದ ಸ್ಕೂಟಿಗೆ ಬಲಿಯಾಗಿದ್ದಾರೆ.ಮೃತ ದೇಹವನ್ನು ಅಚ್ಚು ಪ್ರಗತಿ ಆಂಬುಲೆನ್ಸ್ ಚಾಲಕ ಸುಳ್ಯಕ್ಕೆ ಕೊಂಡೊಯ್ಯಲು ಸಹಕರಿಸಿದರು.ಧರ್ಮಸ್ಥಳ ಪ್ರತಿನಿಧಿ ಚಿದಾನಂದ, ಸಫ್ವಾನ್ ಗೂನಡ್ಕ , ಸುಧಾಕರ್ ಬಾಳಂಬಿ, ಗುರುವಪ್ಪ ಮತ್ತಿತರರು ಸಹಕರಿಸಿದರು. ಸ್ಥಳದಲ್ಲಿ ಪೊಲೀಸ್ ಇಲಾಖೆಯ ನಾಗೇಶ್, ರಾಜು, ಗಿರೀಶ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ,ಸ್ಥಳೀಯರು ಇದ್ದರು.

Related posts

ಪುತ್ತೂರು: SSLC ಮುಗಿಸಿ PUC ಓದುವ ಕನಸು ಕಾಣುತ್ತಿದ್ದ ವಿದ್ಯಾರ್ಥಿನಿ ಹಠಾತ್ ಸಾವು

ಆ ಒಂದು ಕೆಲಸದಿಂದಾಗಿ ರೈಲು ದುರಂತದಲ್ಲಿ ಕನ್ನಡಿಗರ ಜೀವ ಉಳಿಯಿತು..! ದಕ್ಷಿಣ ಕನ್ನಡ ಜಿಲ್ಲೆಯವರು ಸೇರಿದಂತೆ 110 ಕನ್ನಡಿಗರು ಬಚಾವಾದ ರೋಚಕ ಕಥೆ ಇಲ್ಲಿದೆ ಓದಿ..

ಮಡಿಕೇರಿ:ಕೊಡಗು ಜಿಲ್ಲಾ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ!! 40 ಮಂದಿ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ!!