ಸುಳ್ಯ: ಗೂನಡ್ಕ ಸಮೀಪ ಸುಳ್ಯದಿಂದ ಕೊಯನಾಡಿಗೆ ಹೋಗುತ್ತಿದ್ದ ಬೈಕ್ ದನಕ್ಕೆ ಡಿಕ್ಕಿ ಆಗಿ ದನ ಸ್ಥಳದಲ್ಲಿ ಸಾವಿಗೀಡಾಗಿ ಬೈಕ್ ಸವಾರರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಕೊಯಿನಾಡು ಪರಿಸರದ ಸವಾದ್ ಹಾಗೂ ಮಿರ್ಷದ್ ಎಂಬ ಇಬ್ಬರು ಯುವಕರು ಮಂಗಳೂರಿಗೆ ಹೋಗಿದ್ದು ಸಂಜೆ ಮರಳಿ ಬರುವ ಸಂದರ್ಭದಲ್ಲಿ ಗೂನಡ್ಕ ಸಮೀಪ ಘಟನೆ ಸಂಭವಿಸಿದೆ. ಅಪಘಾತದಿಂದ ಸವಾದ್ ರವರಿಗೆ ತಲೆಗೆ ಗಂಭೀರ ಗಾಯವಾಗಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಮಿರ್ಸದ್ ರವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಸುಳ್ಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.