ಕರಾವಳಿ

10,000 ಉದ್ಯೋಗ ಕಡಿತಕ್ಕೆ ಗೂಗಲ್ ನಿರ್ಧಾರ, ಉದ್ಯೋಗಿಗಳ ಎದೆಯಲ್ಲಿ ಢವಢವ

ನ್ಯೂಸ್ ನಾಟೌಟ್: ಇತ್ತೀಚಿಗೆ ಕೆಲವು ಕಂಪನಿಗಳು ಕೋವಿಡ್ ನೆಪದಲ್ಲಿ ಉದ್ಯೋಗಿಗಳನ್ನು ನಿರ್ಧಯವಾಗಿ ರಾತ್ರೋ ರಾತ್ರಿ ಹೊರಕ್ಕೆ ಹಾಕಿ ರಾಕ್ಷಸಿ ಪ್ರವೃತ್ತಿ ಮೆರೆದಿದ್ದವು. ಟ್ವಿಟ್ಟರ್ , ಫೇಸ್‌ಬುಕ್ ಕೂಡ ಉದ್ಯೋಗಿಗಳಿಗೆ ಸ್ವಲ್ಪ ದುಡ್ಡು ಕೊಟ್ಟು ಮನೆಗೆ ಕಳಿಸಿದ್ದವು. ಈ ಸಾಲಿನಲ್ಲಿ ಈಗ ಗೂಗಲ್ ಕೂಡ ಸೇರಿಕೊಳ್ಳಲಿದೆ.

ಹೌದು, ಗೂಗಲ್ ಮುಂದಿನ ವರ್ಷದಿಂದ ಹಂತಹಂತವಾಗಿ ೧೦,೦೦೦ ಸಾವಿರಕ್ಕೂ ಅಧಿಕ ನೌಕರರನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ. ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಚೇತರಿಸಿ ಕೊಳ್ಳಲು ಟೆಕ್ ದೈತ್ಯ ಕಂಪನಿಗಳು ಅನಿವಾರ್ಯವಾಗಿ ಉದ್ಯೋಗ ಕಡಿತದ ಹಾದಿಯನ್ನು ಹಿಡಿದಿದ್ದು, ಗೂಗಲ್ ಕೂಡ ತನ್ನ ಒಟ್ಟು ಉದ್ಯೋಗಿಗಳಲ್ಲಿ ಕರಷ್ಟು ಪ್ರಮಾಣವನ್ನು ವಜಾಗೊಳಿಸಲಿದೆ ಎನ್ನಲಾಗಿದೆ. ಗೂಗಲ್‌ ನ ಮಾತೃಸಂಸ್ಥೆಯಾಗಿರುವ ಅಲ್ಪಾಟೆಟ್ ನಿರೀಕ್ಷೆಗಿಂತ ಕಡಿಮೆ ಉತ್ಪಾದಕತೆ ಹೊಂದಿರುವ ಉದ್ಯೋಗಿಗಳನ್ನು ಗುರುತಿಸಿ ವಜಾ ಮಾಡಲಿದೆ ಎಂದು ಮೂಲಗಳ ಮೂಲಗಳು ತಿಳಿಸಿವೆ. ಗೂಗಲ್ ಜಾಗತಿಕವಾಗಿ ಅತೀ ಹೆಚ್ಚು ವೇತನವನ್ನು ಪಾವತಿಸುವ ಕಂಪನಿಗಳಲ್ಲಿ ಒಂದಾಗಿದ್ದು, 20 17ರಿಂದ ಪ್ರತಿವರ್ಷ ತನ್ನ ಉದ್ಯೋಗಿಗಳ ಸಂಖ್ಯೆ ಯಲ್ಲಿ ಶೇ 20ರಷ್ಟು ಏರಿಕೆ ಮಾಡುತ್ತಲೇ ಬಂದಿತ್ತು.

Related posts

ಬೆಳ್ತಂಗಡಿ:ನಿವೃತ್ತ ಪ್ರಾಧ್ಯಾಪಕ, ಬರಹಗಾರ, ಹಿರಿಯ ಪತ್ರಕರ್ತ ನಾ.ಉಜಿರೆ‌ ಕೊನೆಯುಸಿರು

ಆಲೆಟ್ಟಿ: ವಯನಾಟ್ ಕುಲವನ್ ಗುಡಿಗೆ ಶಿಲಾನ್ಯಾಸ, ಶಿಲ್ಪಿ ಶಶಿಚಾಳಂಗಲ್ ಮಾರ್ಗದರ್ಶನ ಧಾರ್ಮಿಕ ವಿಧಿವಿಧಾನ

ಉಪ್ಪಿನಂಗಡಿ: ಅಂಗಡಿಗೆ ನುಗ್ಗಿ ತರಕಾರಿ ಮೂಟೆಗಳನ್ನೇ ಕದ್ದೊಯ್ದ ಕಳ್ಳರು..! ಮುಂದೇನಾಯ್ತು?