ಕ್ರೈಂರಾಜ್ಯವೈರಲ್ ನ್ಯೂಸ್

GOLD THEFT|ಬಂಗಾರದ ಕಡಗ ಕದ್ದು ಒಡಿದ ಬುರ್ಖಾಧಾರಿ ಮಹಿಳೆಯರು..! ಇಬ್ಬರು ಮಹಿಳೆಯರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ನ್ಯೂಸ್ ನಾಟೌಟ್: ಚಿನ್ನ ಖರೀದಿಗೆ ಬಂದವರಂತೆ ಬಂದು ಬಂಗಾರದ ಕಡಗ ಕದ್ದು ಪರಾರಿಯಾದ ಘಟನೆ ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ತನಿಷ್ಕ ಜ್ಯೂವೆಲ್ಲರಿ ಶಾಪ್‌ ನಲ್ಲಿ ನಡೆದಿದೆ. ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಚಿನ್ನದ ಆಭರಣ ಕದ್ದು ಪರಾರಿಯಾಗಿದ್ದಾರೆ. ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದೆ.

ಸುಮಾರು 2 ಲಕ್ಷ 15 ಸಾವಿರ ರೂ. ಬೆಲೆಬಾಳುವ 30 ಗ್ರಾಂನ ಎರಡು ಚಿನ್ನದ ಕಡಗ ಕದ್ದಿದ್ದಾರೆ ಎನ್ನಲಾಗಿದೆ. ಚಿನ್ನಾಭರಣ ಖರೀದಿ ನೆಪದಲ್ಲಿ ಹಲವು ಒಡವೆಗಳನ್ನ ವಿಚಾರಿಸಿದ್ದ ಬುರ್ಖಾಧಾರಿ ಮಹಿಳೆಯರು. ಈ ವೇಳೆ ಚಿನ್ನಾಭರಣಗಳನ್ನು ತೆಗೆದಿದ್ದ ಶಾಪ್ ಸಿಬ್ಬಂದಿ. ಎಲ್ಲ ಒಡವೆಗಳನ್ನು ನೋಡುವಾಗ ಬಂಗಾರದ ಕಡಗ ಕೈಯಲ್ಲೇ ಹಿಡಿದುಕೊಂಡಿರುವ ಮಹಿಳೆ. ಬಳಿಕ ಶಾಪ್‌ ಸಿಬ್ಬಂದಿ ಬಳಿ ಯಾವುದೇ ಆಭರಣ ಇಷ್ಟವಾಗಿಲ್ಲ ಎಂದು ಮಹಿಳೆಯರು ಅಲ್ಲಿಂದ ಹೋಗಿದ್ದಾರೆ.

ಆದರೆ ತನಿಷ್ಕ ಶಾಪ್ ಸೇಲ್ಸ್ ಮಹಿಳೆ ಬಂಗಾರದ ಒಡವೆಗಳನ್ನು ಒಳಗಡೆ ಇಡುವಾಗ ಬಂಗಾರದ ಕಡಗ ಕಾಣದಿರುವುದು ಕಂಡು ಅನುಮಾನ ಬಂದಿದೆ. ಇನ್ನೊಮ್ಮೆ ಪರಿಶೀಲಿಸಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಅಷ್ಟೊತ್ತಿಗಾಗಲೇ ಶಾಪ್‌ ನಿಂದ ಮಹಿಳೆಯರು ಪರಾರಿಯಾಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರಿಗೆ ಪೊಲೀಸರು ಬಲೆ ಬೀಸಿದ್ದಾರೆ.

Click 👇

https://newsnotout.com/2024/05/doctor-issue-at-kerala-govt-hospital
https://newsnotout.com/2024/05/kodagu-rashmika-mandana-narendra-modi-atal-bridge

    

https://newsnotout.com/2024/05/anjali-nomore-issue-and-accused-arrested

Related posts

ತಲೆಯಿಂದ ಗುದ್ದಿ ಹಡಗನ್ನೇ ಮುಳುಗಿಸಿದ ತಿಮಿಂಗಿಲ..! ಇಲ್ಲಿದೆ ಭಯಾನಕ ವಿಡಿಯೋ..!

ಮುಳ್ಳು ಚುಚ್ಚಿದೆ ಎಂದು ಮಲಗಿದ್ದ ವ್ಯಕ್ತಿ ಬೆಳಗ್ಗೆ ಏಳಲೇ ಇಲ್ಲ..! ಅದು ಚುಚ್ಚಿದ್ದಲ್ಲ ಕಚ್ಚಿದ್ದು..!

ವಿದ್ಯಾರ್ಥಿನಿಯನ್ನು ಹೊರ ಹಾಕಿದ ಶಾಲೆ ವಿರುದ್ಧ ಕೇಸ್..! ಹೈಕೋರ್ಟ್‌ನಿಂದ ಶಾಲೆಗೆ 1 ಲಕ್ಷ ದಂಡ..!