ಉಡುಪಿಕರಾವಳಿ

ಕಾರ್ಕಳ: ಗೋವಾದಿಂದ ಅಕ್ರಮವಾಗಿ ತರಿಸಿಕೊಂಡು ಮನೆಯಲ್ಲಿಟ್ಟಿದ್ದ ಮದ್ಯ ವಶಕ್ಕೆ..! 200 ಕ್ಕೂ ಅಧಿಕ ಬಾಕ್ಸ್‌ ಗಳು ಪತ್ತೆ..!

141

ನ್ಯೂಸ್ ನಾಟೌಟ್: ಉಡುಪಿ ಅಬಕಾರಿ ಇಲಾಖೆ ಕಾರ್ಯಾಚರಣೆಯೊಂದರಲ್ಲಿ ಕಾರ್ಕಳ ತಾಲೂಕು ಬೋಳ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾದ ಮದ್ಯವನ್ನು ಅಧಿಕಾರಿಗಳು ಇಂದು(ನ.14) ವಶಪಡಿಸಿಕೊಂಡಿದ್ದಾರೆ.

ಅವಿನಾಶ್ ಮಲ್ಲಿ ಎಂಬವರಿಗೆ ಸಂಬಂಧಿಸಿದ ಎರಡು ಮನೆಗಳಿಂದ ಜಪ್ತಿ ಮಾಡಲಾಗಿದೆ. ಲಕ್ಷಾಂತರ ರೂ. ಮೌಲ್ಯದ 200 ಕ್ಕೂ ಅಧಿಕ ಬಾಕ್ಸ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಗೋವಾದಿಂದ ಅಕ್ರಮವಾಗಿ ತರಿಸಿಕೊಂಡಿರುವ ಮದ್ಯವನ್ನು ಮನೆಯಲ್ಲಿ ಸಂಗ್ರಹಿಸಿಡಲಾಗಿತ್ತು.ಮನೆಯಿಂದಲೇ ಲಿಕ್ಕರ್ ವ್ಯವಹಾರ ನಡೆಸುತ್ತಿದ್ದ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/11/shiggavi-byelection-kannada-news-viral-news-ballet-box-viral/
See also  ಕಾರ್ಕಳ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಅಭ್ಯಾಸ ವರ್ಗ ಆರಂಭ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget