ಕಾರ್ಕಳ :ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತಾಲೂಕು ಅಭ್ಯಾಸ ವರ್ಗ ಭುವನೇಂದ್ರ ಪ್ರೌಢ ಶಾಲೆಯಲ್ಲಿ ಚಾಲನೆ ನೀಡಲಾಗಿದೆ. ಉದ್ಘಾಟನೆಯನ್ನು ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ ನೆರವೇರಿಸಿದರು. ಸಮಾಜ ಸೇವಕಿ, ಉದ್ಯಮಿ ರಮಿತಾ ಶೈಲೇಂದ್ರ ಕಾರ್ಕಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಜಿಲ್ಲಾ ಸಹಪ್ರಮುಖರಾದ ಡಾ.ದಯಾನಂದ ಬಾಯಾರ್, ಜಿಲ್ಲಾ ಸಂಚಾಲಕರಾದ ಆಶಿಶ್ ಶೆಟ್ಟಿ ಬೋಳ, ನಗರ ಅಧ್ಯಕ್ಷರಾದ ಅಭಿಷೇಕ್ ಸುವರ್ಣ ಉಪಸ್ಥಿತರಿದ್ದರು.