ಕರಾವಳಿಪುತ್ತೂರು

ಪುತ್ತೂರಿನ ‘ಪ್ರೇತ ವಧು’ವಿಗೆ ಅಂತೂ ಇಂತೂ ವರ ಫಿಕ್ಸ್ ..! ಊರಿಡೀ ಜಾಹೀರಾತುಕೊಟ್ಟ ಬಳಿಕ ಕೊನೆಗೂ ಸಿಕ್ಕಿದ ‘ಪ್ರೇತ ವರ’

ನ್ಯೂಸ್ ನಾಟೌಟ್: ಕರಾವಳಿಯ ವಿವಿಧ ಕಡೆ ಆಚರಣೆಯಲ್ಲಿರುವ ಪ್ರೇತ ಮದುವೆ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದೆ.

ಪುತ್ತೂರಿನ ಪ್ರೇತ ವಧುವಿಗೆ ವರ ಬೇಕಾಗಿದ್ದಾನೆ ಎಂದು ಕುಟುಂಬಸ್ಥರು ಮಾಧ್ಯಮದಲ್ಲಿ ಜಾಹೀರಾತು ಪ್ರಕಟಿಸಿದ್ದರು. ಈ ವರದಿ ಪ್ರಕಟಗೊಂಡ ಬೆನ್ನಲ್ಲೇ ಹಲವಾರು ಕರೆಗಳು ಕುಟುಂಬಸ್ಥರಿಗೆ ಬಂದಿದ್ದವು. ಇದೀಗ ನೋಡಿ ಅಳೆದು ವರನನ್ನು ಕೊನೆಗೂ ಫಿಕ್ಸ್ ಮಾಡಲಾಗಿದೆ.

ಸದ್ಯ ಕಾಸರಗೋಡು ಸಮೀಪದ ಬಾಯಾರು ಕಡೆಯ ಪ್ರೇತ ವರನಿಗೆ ಮದುವೆ ಮಾಡಿಕೊಡಲು ಗುರು ಹಿರಿಯರು ನಿಶ್ಚಯಿಸಿದ್ದಾರೆ. ಮುಂದಿನ ಆಟಿ ತಿಂಗಳಲ್ಲಿ ಮದುವೆ ಮಾಡಿಕೊಡುವುದಾಗಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. 30 ವರ್ಷಗಳ ಹಿಂದೆ 1 ವಾರದ ಮಗು ತೀರಿ ಹೋಗಿತ್ತು. ಆ ವ್ಯಕ್ತಿಗೆ ಪ್ರೇತ ಮದುವೆ ಮಾಡಲು ತೀರ್ಮಾನಿಸಲಾಗಿದೆಯಂತೆ.

ಮದುವೆ ಕ್ರಮವನ್ನು ಕುಟುಂಬ ವರ್ಗ ಸೇರಿ ಸಾಂಕೇತಿಕವಾಗಿ ನಡೆಸುತ್ತಿದೆ. ಮುಂದಿನ ಭಾನುವಾರ ಪ್ರೇತ ವರನ ಕಡೆಯವರು ವಧುವಿನ ಮನೆಗೆ ಬರಲಿದ್ದಾರೆ. ಬಳಿಕ ಇವರು ಕೂಡ ಅವರ ಮನೆಗೆ ಹೋಗಲಿದ್ದಾರೆ. ಬಳಿಕ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಆಟಿಯಲ್ಲಿ ಮದುವೆ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.

Related posts

ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ನಟಿ, ಸಮಂತಾರ ಸರಳತೆಗೆ ಫ್ಯಾನ್ಸ್ ಫಿದಾ, ವಿಡಿಯೋ ವೈರಲ್!

ಫಾಜಿಲ್ ಹತ್ಯೆ ಪ್ರಕರಣ: ಪೊಲೀಸರಿಗೆ ಸಿಕ್ಕಿತು ಮಹತ್ತರ ಸುಳಿವು?

ಫಾಜಿಲ್ ಕೊಲೆಗೆ ಬಳಸಿದ ಕಾರು ಕಾರ್ಕಳದಲ್ಲಿ ಪತ್ತೆ..!