ಕರಾವಳಿಸುಳ್ಯ

ಗ್ಯಾಸ್ ಸಿಲಿಂಡರ್ ಬೇಡ,2-3 ಪೀಸ್ ಸೌದೆ ,ಕರೆಂಟ್ ಚಾರ್ಜ್ ಇದ್ದರೆ ಸಾಕು ಅಡುಗೆ ರೆಡಿ

ನ್ಯೂಸ್ ನಾಟೌಟ್: ಗ್ಯಾಸ್ ಸಿಲಿಂಡರ್ ಬೆಲೆ ದುಬಾರಿಯಾಗಿದೆ.ಒಂದು ಸಿಲಿಂಡರ್ ಮನೆ ಬಾಗಿಲಿಗೆ ಬಂದರೆ  ಮನೆ ಬಳಕೆಗೆ  ಅಬ್ಬಬ್ಬಾ ಎಂದರೂ ಎರಡು ತಿಂಗಳು ಉಪಯೋಗಿಸಿಕೊಳ್ಳಬಹುದು.ಮತ್ತೆ ಹೊಸದಾದ ಸಿಲಿಂಡರ್ ಬುಕ್ ಮಾಡಬೇಕು.ಮನೆ ಬಾಗಿಲಿಗೆ ಗ್ಯಾಸ್ ಸಿಲಿಂಡರ್ ಬಂದಾಗ ಕನಿಷ್ಟವೆಂದರೂ ಒಂದು ಸಾವಿರದ ನೋಟು  ಕೂಡ ರೆಡಿಯಾಗಿರಬೇಕು.

ವಿದ್ಯುತ್ ಸೌರ ಕಟ್ಟಿಗೆ ಒಲೆ:

ಇನ್ನು ಮುಂದೆ  ಈ ಚಿಂತೆ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಮನೆ ಅಡುಗೆಗೆಂದು ವಿದ್ಯುತ್ ಒಲೆ ಮಾರ್ಕೆಟ್ ಗೆ ಲಗ್ಗೆಯಿಟ್ಟಿದೆ.ಕರೆಂಟ್ ಚಾರ್ಜ್ ಮಾಡಿದ್ರೆ ಸಾಕು. ಒಂದು ವಾರ ನೀವು ಆರಾಮವಾಗಿ ಒಲೆಯನ್ನು ಬಳಸಬಹುದು.ಒಲೆ ಉರಿಸುವಾಗ ನಿಮ್ಮ ಬಳಿ ೧-೨ ಸೌದೆ ಪೀಸ್ ಗಳಿದ್ದರೆ ಅನ್ನ-ಸಾರು ರೆಡಿಯಾಗಿರುತ್ತದೆ.ಬೆಂಕಿಯನ್ನು ಹೆಚ್ಚು-ಕಡಿಮೆ ಮಾಡಿಕೊಳ್ಳಲು ಇಲ್ಲಿ ಆಯ್ಕೆಗಳಿವೆ. ಈ ವಿದ್ಯುತ್ ಸೌರ ಕಟ್ಟಿಗೆ ಒಲೆಯಲ್ಲಿ ಬೂದಿಯನ್ನು ಒಂದೆಡೆ ಶೇಖರಿಸಿಡಬಹುದು.ಒಲೆಯಲ್ಲಿರುವ ಲಾಕ್ ಸಿಸ್ಟಮ್ ನ್ನು ಅನ್ ಲಾಕ್ ಮಾಡಿದಾಗ ಬೂದಿ ಕೆಳಭಾಗಕ್ಕೆ ಬಂದು ಬೀಳುತ್ತದೆ.

ಪ್ರಯೋಜನಗಳೇನು?

ಒಂದೇ ಬಾರಿ ನೀವು 2800 ರೂ. ನೀಡಿದರಾಯ್ತು. ಪದೇ ಪದೇ ದುಡ್ಡು ಕೊಡುವ ಅವಶ್ಯಕತೆ ನಿಮಗೆ ಬರುವುದಿಲ್ಲ.ಕಟ್ಟಿಗೆ ಉಪಯೋಗಿಸಿ ಅಡುಗೆ ಮಾಡುವುದರಿಂದ ಆರೋಗ್ಯ ದೃಷ್ಟಿಯಲ್ಲೂ ತುಂಬಾ ಪ್ರಯೋಜನಗಳಿವೆ.ಮೊಬೈಲ್ ಚಾರ್ಜ್ ಮಾಡುವುದಕ್ಕೆ ನಿಮಗೆಷ್ಟು ವಿದ್ಯುತ್ ಖರ್ಚಾಗುತ್ತದೋ ಅಷ್ಟೇ ಚಾರ್ಜನ್ನು ಈ ವಿದ್ಯುತ್  ಒಲೆ ಯಂತ್ರ  ತೆಗೆದುಕೊಳ್ಳುತ್ತದೆ. ಹೀಗಾಗಿ ಕರೆಂಟ್ ಬಿಲ್ ದುಬಾರಿಯಾಗುತ್ತದೆ ಎಂಬ ಗೊಂದಲ ಇರುವುದಿಲ್ಲ.ತಿಂಗಳಲ್ಲಿ ಒಂದು ಮೂಟೆ ಸೌದೆ ಅಥವಾ ರಟ್ ಪೀಸ್ ಇದ್ದರೂ ನಿಶ್ಚಿಂತೆಯಿಂದ ಅಡುಗೆ ಮಾಡಬಹುದು ಎನ್ನುತ್ತಾರೆ ಮಹಾಲಕ್ಷ್ಮೀ ಕಟ್ಟಿಗೆ ಒಲೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸೂರಜ್ ಅವರು.

ಖರೀದಿಸುವುದು ಹೇಗೆ?

ಸದ್ಯ ಮಾರ್ಕೆಟ್ ಗೆ ಈ ಒಲೆ ಪರಿಚಯಾಗುತ್ತಿದೆಯಷ್ಟೇ. ಹಾಗಾಗಿ ಗ್ರಾಹಕರು 7795738208 ಈ ನಂಬರ್ ಗೆ ಕಾಲ್ ಮಾಡಿದರೆ ಮಹಾರಾಷ್ಟ್ರದಿಂದ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ಈ ವಿದ್ಯುತ್ ಸೌರ ಕಟ್ಟಿಗೆ ಒಲೆ ಬರುತ್ತದೆ.ಖರೀದಿಸುವ ಸಮಯದಲ್ಲಿ ನಿಮಗೆ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದು, ಆರು ತಿಂಗಳು ಏನೇ ಸಮಸ್ಯೆಗಳಾದರೂ ರಿಪೇರಿ ಮಾಡಿಕೊಡುವ ಜವಾಬ್ದಾರಿ ಕಂಪನಿಯದ್ದು.

ಸದ್ಯ ಈ ಒಲೆ ಖರೀದಿಸಲು ಹೆಚ್ಚಿನವರು ಆಸಕ್ತಿ ತೋರಿಸುತ್ತಿದ್ದಾರೆ.ಒಂದು ಕಡೆ ಈ ಒಲೆಯ ಬೆಲೆಯೂ ಕಡಿಮೆ  ಮತ್ತೊಂದೆಡೆ ತಿಂಗಳು ತಿಂಗಳು ಗ್ಯಾಸ್ ಸಿಲಿಂಡರ್ ಗೆ ಕಾಯುವ ಅವಶ್ಯಕತೆನು ಬರೋದಿಲ್ಲ.ಆರೋಗ್ಯ ದೃಷ್ಟಿಯಿಂದಲೂ ಈ ಒಲೆ ಹಲವು ಪ್ರಯೋಜನಕಾರಿ ಕೂಡ.

Related posts

ಮಡಿಕೇರಿ: ಮಿತಿಮೀರಿದ ಕಾಡಾನೆ ಹಾವಳಿ, ಭಯದ ನೆರಳಲ್ಲಿ ಶಾಲಾ ಮಕ್ಕಳು, ಪೋಷಕರು..! ಶಾಲಾ ಮಕ್ಕಳನ್ನು ತಮ್ಮ ವಾಹನದಲ್ಲೇ ಮನೆಮನೆಗೆ ತಲುಪಿಸಿದ ಅರಣ್ಯ ಇಲಾಖೆ

ಸುಳ್ಯ: ಬೀದಿ ನಾಟಕದ ಮೂಲಕ ಜನರಿಗೆ ಅರಿವು ಮೂಡಿಸಿದ NMC ವಿದ್ಯಾರ್ಥಿಗಳು..!”ಮತದಾನ ಯಾಕೆ ಬೇಕು?”ಎಂಬ ಜಾಗೃತಿ ಕಾರ್ಯಕ್ರಮ..!

ಪುತ್ತೂರು: ಸ್ಪೀಕರ್ ಯು.ಟಿ ಖಾದರ್ ನಾಗಾರಾಧನೆಗೆ ಭೂಮಿ ಬಿಟ್ಟುಕೊಟ್ಟದ್ದೇಕೆ? ಏನಿದು ತುಳುನಾಡ ಕೋಮು ಸೌಹಾರ್ದತೆಯ ಕಥೆ?