ಕ್ರೈಂ

ಮನೆಯ ತಾರಸಿಯಲ್ಲಿ ಗಾಂಜಾ ಗಿಡ ನೆಟ್ಟು ಪೊಲೀಸರಿಗೆ ಸಿಕ್ಕಿಬಿದ್ದ ಭೂಪ

ಬಿಡದಿ: ಮನೆಯ ತಾರಸಿಯಲ್ಲಿ ವಿವಿಧ ಬಗೆಯ ಹೂವಿನ, ತರಕಾರಿ ಗಿಡಗಳನ್ನು ನೆಟ್ಟು ಮನೆಯ ಅಂದವನ್ನು ಇನ್ನಷ್ಟು ಹೆಚ್ಚುವಂತೆ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಭೂಪ ಮನೆಯ ತಾರಸಿಯಲ್ಲಿ ಹೈಡ್ರೋ ಗಾಂಜಾ ಗಿಡಗಳನ್ನು ನೆಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಆತನ ಹೆಸರು ಜಾವಿದ್ ರುಸ್ತಂಪುರಿ. ಆತನಿಗೆ 36 ವರ್ಷ, ಇರಾನ್‌ ಮೂಲದ ಆತ ಬಹು ವರ್ಷಗಳಿಂದ ಬೆಂಗಳೂರು ಸಮೀಪದ ಬಿಡದಿಯಲ್ಲಿ ನೆಲೆಸಿದ್ದಾನೆ. ಇತ್ತೀಚೆಗೆ ಆತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಠಾಣೆಗೆ ಕರೆದೊಯ್ದ ಪೊಲೀಸರು ಆತನನ್ನು ಏರೋಪ್ಲೇನ್ ಹತ್ತಿಸಿದ್ದಾರೆ. ಆತ ಎಲ್ಲವನ್ನು ಬಾಯಿ ಬಿಟ್ಟಿದ್ದಾನೆ.ಮನೆಯ ತಾರಸಿ ಹಾಗೂ ಕೊಠಡಿಯಲ್ಲಿದ್ದ 150ಕ್ಕೂ ಹೆಚ್ಚು ಗಿಡಗಳು ಹಾಗೂ ರಾಸಾಯನಿಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾರುಕಟ್ಟೆಯಲ್ಲಿ ಇವುಗಳ ಮೌಲ್ಯ ಲಕ್ಷಾಂತರ ರೂಪಾಯಿಗಳಷ್ಟಿದೆ ಎಂದು ಹೇಳಲಾಗಿದೆ.

ಆನ್‌ಲೈನ್ ನಲ್ಲಿ ಬಿತ್ತನೆ ಬೀಜ ಖರೀದಿ

ಆನ್‌ಲೈನ್‌ ಮೂಲಕ ಬಿತ್ತನೆ ಬೀಜಗಳನ್ನು ತರಿಸಿಕೊಂಡಿದ್ದ ಆರೋಪಿ ಕಳೆದ ಒಂದೂವರೆ ವರ್ಷದಿಂದ ಇಲ್ಲಿ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಎನ್ನಲಾಗಿದೆ. ಬೆಂಗಳೂರು ಸಿಸಿಬಿ ಪೊಲೀಸರು ಡಿ.ಜೆ. ಹಳ್ಳಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ ಆತ ಬಿಡದಿಯಲ್ಲಿ ಗಿಡಗಳನ್ನು ಬೆಳೆದಿದ್ದಾಗಿ ಸತ್ಯ ಹೇಳಿದ್ದಾನೆ. ಆರೋಪಿಯೊಂದಿಗೆ ಆತನ ಬಿಡದಿ ನಿವಾಸಕ್ಕೆ ಬಂದ ಪೊಲೀಸರು ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Related posts

ಮಂಗಳೂರು: ಇಸ್ರೇಲ್ ಗೆ ದಾಳಿ ನಡೆಸಿದ ಹಮಾಸ್ ಉಗ್ರರನ್ನು ಬೆಂಬಲಿಸಿ ವಿಡಿಯೋ ಹರಿಬಿಟ್ಟ ಈತ ಯಾರು? ಝಾಕಿರ್ ಬಂಧನಕ್ಕೆ ಹಿಂದೂ ಸಂಘಟನೆಗಳ ಒತ್ತಾಯ! ಇಲ್ಲಿದೆ ವೈರಲ್ ವಿಡಿಯೋ

ನಟ ದರ್ಶನ್ ನನ್ನು ಬಂಧಿಸಿದ ರಿಯಲ್ ಪೊಲೀಸ್ ‘ಸಿಂಗಂ’ ಯಾರು..? ಬಂಧನಕ್ಕೂ ಮೊದಲು ಆ ಖಡಕ್ ಅಧಿಕಾರಿಯಿಂದ ನಡೆದಿತ್ತು ರಾತ್ರಿಯಿಡೀ ಸಿದ್ಧತೆ..! ಇಲ್ಲಿದೆ ಓದಿ ‘ಪಿನ್ ಟು ಪಿನ್’ ರೋಚಕ ಡಿಟೇಲ್ಸ್

ಪುತ್ತೂರು: ಶಾಲಾ ಬಾಲಕಿಯನ್ನು ಮಡಿಕೇರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಟ್ವಿಸ್ಟ್! ಕಡಬಕ್ಕೂ ಈ ಪ್ರಕರಣಕ್ಕೂ ಏನು ಸಂಬಂಧ?