ಕರಾವಳಿ

ಮಂಗಳೂರು: ವಿದ್ಯಾರ್ಥಿಗಳ ಕಾರಿನ ಮೇಲೆ ದಾಳಿ, ಐವರ ಬಂಧನ

ಸುರತ್ಕಲ್: ವಾಹನವೊಂದರಲ್ಲಿ ಜೊತೆಯಾಗಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ವೇಳೆ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಏನಿದು ಘಟನೆ?

ಸುರತ್ಕಲ್ ಟೋಲ್ ಬೂತ್ ಬಳಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೇರೆ ಬೇರೆ ಧರ್ಮದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಜೊತೆಯಾಗಿ ಪ್ರಯಾಣಿಸುತ್ತಿದ್ದಾರೆ ಎಂದು ಗುಂಪೊಂದು ತಗಾದೆ ತೆಗೆದಿದೆ.  ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿಯೇ, ಕಾರಿನಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ, ಅಸಹ್ಯಕರ ಪದಗಳನ್ನು ಬಳಸಿ ಬಯ್ಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

Related posts

ಕುಕ್ಕರ್‌ ಬಾಂಬ್ ಸ್ಫೋಟ: ಸಂತ್ರಸ್ತ ಆಟೋ ಚಾಲಕನ ಮನೆ ನವೀಕರಣ

ಸುಳ್ಯ:ವಿದ್ಯಾರ್ಥಿಗಳ ಪ್ರವಾಸಕ್ಕೆಂದು ಇರಿಸಿದ್ದ ನಗದನ್ನೇ ದೋಚಿದ ಖದೀಮರು..!,ಶಾಲೆಯ ಬೀಗ ಮುರಿದು ಒಳಪ್ರವೇಶಿಸಿ ಕೃತ್ಯ

ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ,ಪ್ರಾಣಾಪಾಯದಿಂದ ಪಾರು ,ಮುಂದುವರಿದ ತನಿಖೆ