ಕರಾವಳಿರಾಜಕೀಯವೈರಲ್ ನ್ಯೂಸ್

ಗಂಗಾಜಲಕ್ಕೆ 18% ಜಿಎಸ್‌ಟಿ..? ಕಸ್ಟಮ್ಸ್ ಮಂಡಳಿ ಈ ಬಗ್ಗೆ ಹೇಳಿದ್ದೇನು?

ನ್ಯೂಸ್ ನಾಟೌಟ್ : ಭಾರತೀಯರಿಗೆ ಗಂಗೆ ಪರಮಪವಿತ್ರ. ಭಾರತೀಯರ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನ ತನಕ ಗಂಗೆ (Ganga River) ಅದರದ್ದೇ ಆದ ಪ್ರಾಮುಖ್ಯತೆ ಪಡೆದಿದೆ. ಅಂತಹ ಪರಮ ಪವಿತ್ರವಾದ ಗಂಗಾ ನದಿ ನೀರಿಗೆ 18% ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದೀರಿ.

ಗಂಗಾಜಲಕ್ಕೆ 18% ತೆರಿಗೆ (Tax) ವಿಧಿಸಿದ ಖರ್ಗೆ ಆರೋಪಕ್ಕೆ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಸ್ಪಷ್ಟನೆ ನೀಡಿದೆ.ಗಂಗಾಜಲಕ್ಕೆ 18% ತೆರಿಗೆ (Tax) ವಿಧಿಸುತ್ತಿಲ್ಲ ಎಂದು ಮಂಡಳಿ ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಿಬಿಐಸಿ, ಗಂಗಾಜಲ ಅಥವಾ ಯಾವುದೇ ಇತರ ಪೂಜೆ ವಸ್ತುಗಳ ಮೇಲೆ ಯಾವುದೇ ಜಿಎಸ್‌ಟಿಯನ್ನು ವಿಧಿಸುವುದಿಲ್ಲ ಎಂದು ತಿಳಿಸಿದೆ.

2017ರಲ್ಲಿ ನಡೆದ 14 ಮತ್ತು 15ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಪೂಜಾ ಸಾಮಗ್ರಿಗಳಿಗೆ ಜಿಎಸ್​ಟಿ ವಿಧಿಸುವುದರ ಸಂಬಂಧ ವಿಸ್ತೃತವಾಗಿ ಚರ್ಚೆ ನಡೆದಿದೆ. ಇವುಗಳನ್ನು ಜಿಎಸ್​ಟಿ ವಿನಾಯಿತಿ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ. ಜಿಎಸ್​ಟಿ ಜಾರಿಗೆ ಬಂದಾಗಿನಿಂದಲೂ ವಸ್ತುಗಳಿಗೆ ಜಿಎಸ್‌ಟಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ರಾಜ್ಯಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾಡಿದ ಟ್ವೀಟ್‌ನಿಂದ ಇದು ಸುದ್ದಿಯಾಗಿತ್ತು. ಇದು ಲೂಟಿಯ ತುತ್ತತುದಿ. ಬೂಟಾಟಿಕೆಯ ಪರಮಾವಧಿ ಎಂದು ಕಾಂಗ್ರೆಸ್‌ ಈ ಬಗ್ಗೆ ಹೇಳಿತ್ತು.ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಸಿಬಿಐಸಿ ಸ್ಪಷ್ಟನೆ ನೀಡಿದೆ.

Related posts

ಮಸೀದಿ ಮೇಲೆ ಕೇಸರಿ ಧ್ವಜ..! ಹನುಮನ ದೇಗುಲದ ಮೇಲಿದ್ದ ಕೇಸರಿ ಧ್ವಜವನ್ನು ಮಸೀದಿ ಗೋಪುರದ ಮೇಲೆ ಹಾರಿಸಿದ್ದೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಪುತ್ತೂರು: ಭಾರಿ ಮಳೆಗೆ ಮುಳುಗಡೆಯಾದ ಚೆಲ್ಯಡ್ಕ ಸೇತುವೆ, ಪ್ರತಿ ವರ್ಷ ಮುಳುಗಡೆಯಾದರೂ ಪರ್ಯಾಯ ಕ್ರಮ ಕೈಗೊಳ್ಳದ ಇಲಾಖೆ !

ಕೊಯನಾಡು: ಕೊರಗಜ್ಜನ ದರ್ಶನಕ್ಕೆ ಹೊರಟಿದ್ದ ಕಾರಿಗೆ ಬೈಕ್ ಡಿಕ್ಕಿ, ಯುವಕ-ಯುವತಿ ಪವಾಡ ಸದೃಶ ಪಾರು..!