ದೇಶ-ಪ್ರಪಂಚಬೆಂಗಳೂರುರಾಜಕೀಯ

ಮದ್ಯದ ಬಾಟಲಿ ಹಿಡಿದು ಫ್ರೀ ಬಸ್ ಏರಿದ ಮಹಿಳೆಯರು! ಬೈದು ಕೆಳಕ್ಕಿಳಿಸಿದ ಕಂಡೆಕ್ಟರ್, ಪೊಲೀಸ್ ಠಾಣೆಯೆದುರೇ ಹೈಡ್ರಾಮಾ..!

ನ್ಯೂಸ್ ನಾಟೌಟ್: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರಂಭಿಸಿದ ಫ್ರೀ ಬಸ್ ಯೋಜನೆ ಜಾರಿಯಾದ ಬೆನ್ನಲ್ಲೇ ಮಹಿಳಾ ಪ್ರಯಾಣಿಕರು ಫ್ರೀ ಬಸ್ಸು ಮಾತ್ರವಲ್ಲದೇ ಇನ್ನೂ ಕೆಲವು ಡಿಮ್ಯಾಂಡ್ ಗಳನ್ನು ಮುಂದಿಡುತ್ತಿದ್ದಾರೆ.ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಫ್ರೀ ಬಸ್ ಅಂತ ಹೇಳ್ತೀರಾ ಆದರೆ ಬಸ್ ಗಳೇ ಇಲ್ಲ, ಬಸ್ ವ್ಯವಸ್ಥೆ ಕಲ್ಪಿಸಿ ಕೊಡಿ ಎಂದು ಹೇಳಿದ್ದರು.ಇದೀಗ ಗದಗದಲ್ಲಿ ಇನ್ನೊಂದು ಕಿರಿಕ್ ನಡೆದಿದೆ.ಅದೇನೆಂದ್ರೆ ಬಸ್ ನಲ್ಲಿ ಮದ್ಯ ಸಾಗಿಸಲು ಅವಕಾಶ ಕೊಡಬೇಕು ಎಂದು ಮಹಿಳೆಯರು ಠಾಣೆ ಮೆಟ್ಟಿಲನ್ನೇ ಹತ್ತಿದ್ದಾರೆ!


ಗದಗ ಮೂಲದ ಮಹಿಳೆಯರಿಬ್ಬರು ಹುಬ್ಬಳ್ಳಿಯಿಂದ ಮದ್ಯದ ಬಾಟಲ್‌ ಹಿಡಿದುಕೊಂಡು ಬಸ್ ನಲ್ಲಿ ಕುಳಿತಿದ್ದು, ಮದ್ಯದ ಬಾಟಲ್‌ ಕೊಂಡೊಯ್ಯಲು ಅಣಿಯಾಗಿದ್ದರು.ಈ ವೇಳೆ ಕಂಡಕ್ಟರ್‌ ಇದನ್ನ ಆಕ್ಷೇಪಿಸಿದ್ದಾರೆ.ಮಾತ್ರವಲ್ಲ ಹುಬ್ಬಳ್ಳಿಯಿಂದ ಗದಗಕ್ಕೆ ಹೋಗುತ್ತಿದ್ದ ಈ ಬಸ್‌ನಲ್ಲಿದ್ದ ಮದ್ಯ ಹಿಡಿದ ಮಹಿಳೆಯರನ್ನು ಬಸ್ಸಿನಿಂದ ಇಳಿಸಿದ್ದಾನೆ. ಆರಂಭದಲ್ಲಿ ಮಾತಿನ ಚಕಮಕಿ ನಡೆಯಿತು.ಬಳಿಕ ಹೈಡ್ರಾಮಾವೇ ಸೃಷ್ಟಿಯಾಯಿತು.ಈ ಮಹಿಳೆಯರು ಹುಬ್ಬಳ್ಳಿಯ ಆರ್ಮಿ ಕ್ಯಾಂಟೀನ್‌ನಿಂದ ಮದ್ಯದ ಬಾಟಲ್ ತರುತ್ತಿದ್ದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ತಮಗೆ ಮದ್ಯ ಒಯ್ಯಲು ಅವಕಾಶ ನೀಡದೆ ಇದ್ದದ್ದು ಮಾತ್ರವಲ್ಲ, ಬಸ್ಸಿನಿಂದ ಕೆಳಗೆ ಇಳಿಸಿದ್ದರಿಂದ ಬಸ್‌ ನಿರ್ವಾಹಕನ ವಿರುದ್ಧ ಪೊಲೀಸ್‌ ಠಾಣೆಯ ಮೆಟ್ಟಿಲನ್ನೇ ಏರಿದ್ದಾರೆ.ಗದಗ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಮಹಿಳೆಯರು ತಮಗೆ ಬಸ್ಸಿನಲ್ಲಿ ಮದ್ಯ ಕೊಂಡೊಯ್ಯಲು ಅವಕಾಶ ಕೊಡಿ ಎಂದು ಆಗ್ರಹಿಸಿದ್ದಾರೆ. ಅವರಿಗೆ ನಿವೃತ್ತ ಯೋಧರ ಸಂಘ ಸಾಥ್ ನೀಡಿದೆ ಎಂದು ತಿಳಿದು ಬಂದಿದೆ.

ʻʻನಾವು ಇಂದು ಮಾತ್ರವಲ್ಲ ಈ ಹಿಂದೆಯೂ ಹಲವು ಬಾರಿ ಮದ್ಯ ತೆಗೆದುಕೊಂಡು ಬಂದಿದ್ದೇವೆ.ಅವತ್ತು ಇಲ್ಲದ ರೂಲ್ಸ್ ಇವತ್ಯಾಕೆ?ʼʼ ಎಂದು ಪ್ರಶ್ನಸಿರುವ ಮಹಿಳೆಯರು ಮದ್ಯ ತರಲು ನಮಗೆ ಸರಕಾರವೇ ದಾರಿ ತೋರಿಸಲಿ ಎಂದು ಹೇಳಿದ್ದಾರೆ.ಬಸ್ಸಿನಲ್ಲಿ ಕುಡಿದು ತೂರಾಡುತ್ತಿರುವವರಿಗೆ ಅವಕಾಶ ಕೊಡ್ತೀರಿ,ಆದ್ರೆ ಮನೆಗೆ ಮದ್ಯದ ಬಾಟಲ್ ಕೊಂಡು ಹೋಗಲು ಅವಕಾಶ ಯಾಕಿಲ್ಲ.ನಾವು ಯಾವುದೇ ತಂಟೆ ತಕರಾರು ಮಾಡದೇ ನಮ್ಮ ಪಾಡಿಗೆ ಕುಳಿತುಕೊಂಡಿದ್ದೇವೆ. ನಾವೇನು ಬಸ್ಸಿನಲ್ಲಿ ಕುಡಿದು ಗಲಾಟೆ ಮಾಡಿದ್ದೇವಾ?ʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

https://www.youtube.com/watch?v=CXCcGSvUAY4&t=16s

Related posts

ಫೇಲ್ ಆದದ್ದಕ್ಕೆ ಕೆರೆಗೆ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ..! ಹೆದರಿ ತಂದೆಯ ನಂಬರ್ ಬ್ಲಾಕ್ ಮಾಡಿದ್ದ ಮಗ..!

ಈಕೆ 8 ವರ್ಷ ಪ್ರಾಯದ ಬಾಲಕಿ..!ಇದೀಗ 5 ಕೋಟಿ ರೂ.ಬೆಲೆ ಬಾಳುವ ಮನೆಯ ಒಡತಿ!!ಇದೆಲ್ಲಾ ಹೇಗೆ ಸಾಧ್ಯವಾಯಿತು?

33 ಕೋಟಿ ರೂಪಾಯಿ ಲಾಟರಿ ಗೆದ್ದ ಭಾರತೀಯ ಯಾರು..? ಅಬುಧಾಬಿ ಲಾಟರಿ ಟಿಕೆಟ್ ಉಚಿತವಾಗಿ ಸಿಕ್ಕಿದ್ದೇಗೆ..?