Uncategorized

ಕೇರಳದ ಮುನ್ನಾಡಿನ ನೆಹರು ಗ್ರಂಥಾಲಯದ ಸಭಾಭವನದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ;ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಕಾರ್ಯಕ್ರಮ

ನ್ಯೂಸ್ ನಾಟೌಟ್ : ಒಂದು ದಿನದ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರವು ಕೇರಳದ ಕಾಸರಗೋಡಿನ ಮುನ್ನಾಡು ಎಂಬಲ್ಲಿ ಇಂದು (ಫೆ.೨೪ರಂದು) ನಡೆಯಿತು. ನೆಹರು ವಾಯನಶಾಲಾ ಮತ್ತು ಗ್ರಂಥಾಲಯ ಇವರ ವತಿಯಿಂದ ಹಾಗೂ ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ನೆಹರು ಗ್ರಂಥಾಲಯದ ಸಭಾಭವನದಲ್ಲಿ ನೆರವೇರಿತು.

ಶಿಬಿರದಲ್ಲಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು, ಕಲಿಕಾ ವಿದ್ಯಾರ್ಥಿಗಳು ಮತ್ತು ಇತರ ಸಿಬ್ಬಂದಿಗಳು ಭಾಗವಹಿಸಿದರು.ಉಚಿತ ಆಯುರ್ವೇದ ವೈದ್ಯಕೀಯ ಶಿಬಿರದಲ್ಲಿ ಹಲವು ವಿದ್ಯಾರ್ಥಿಗಳು ಸೇರಿದಂತೆ ,ಸ್ಥಳೀಯರು ಕೂಡ ಭಾಗವಹಿಸಿ ಈ ಶಿಬಿರದ ಪ್ರಯೋಜನವನ್ನು ಪಡೆದರು.

Related posts

ಪತಿ-ಪತ್ನಿಯ ನಿಗೂಢ ಸಾವು, ಪತ್ನಿಯ ಕುಟುಂಬಸ್ಥರಿಂದ ಪತಿಯ ಮನೆಗೆ ಬೆಂಕಿ..! ಹೆಂಡತಿ ಶವ ಪತ್ತೆಯಾದ ಬೆನ್ನಲ್ಲೇ ಕೆರೆಗೆ ಹಾರಿದ ಗಂಡ..! ಒಂದು ವರ್ಷದ ಮಗು ಅನಾಥ..!

ಎರಡು ಸಲ ‘ಕಾಂತಾರ’ ಸಿನಿಮಾ ನೋಡಿದ ಬಾಹುಬಲಿ ಪ್ರಭಾಸ್ ಹೇಳಿದ್ದೇನು?

ಮನೆಯಲ್ಲಿ ಮಲಗಿದ್ದ ವ್ಯಕ್ತಿಗೆ ಟೋಲ್ ಶಾಕ್..!