ರಾಜಕೀಯ

ಕಾಂಗ್ರೆಸ್‌ನಿಂದ ನಾಲ್ಕನೇ ಗ್ಯಾರಂಟಿ ಯೋಜನೆ ಘೋಷಣೆ

ನ್ಯೂಸ್‌ನಾಟೌಟ್‌: ರಾಜ್ಯ ವಿಧಾನಸಭಾ ಚುನಾವಣೆಗೆ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆ ಬಿರುಸು ಪಡೆದುಕೊಂಡಿದೆ. ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸಿದ್ದು, ವಿವಿಧ ಯೋಜನೆಗಳ ಮೂಲಕ ಪ್ರತಿ ವರ್ಗದ ಜನರ ಮನಗೆಲ್ಲಲು ಮುಂದಾಗಿದೆ. ಇದೀಗ ಕಾಂಗ್ರೆಸ್‌ 4ನೇ ಗ್ಯಾರಂಟಿ ಯೋಜನೆ ಯುವ ನಿಧಿ ಘೋಷಿಸಿದೆ. ನಿರುದ್ಯೋಗಿ ಪದವೀಧರರಿಗೆ 3000 ರೂ. ಹಾಗೂ ಡಿಪ್ಲೊಮಾ ಪದವೀಧರರಿಗೆ ಪ್ರತಿತಿಂಗಳು 1500 ರೂ. ನಿರುದ್ಯೋಗ ಭತ್ಯೆ ಘೋಷಿಸಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಯುವ ಕ್ರಾಂತಿ ಸಮಾವೇಶದಲ್ಲಿ ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಯುವನಿಧಿ ಹೆಸರಿನ ಗ್ಯಾರಂಟಿ ಕಾರ್ಡ್‌ ಬಿಡುಗಡೆಗೊಳಿಸಿದರು. ಈಗಾಗಲೇ ಕಾಂಗ್ರೆಸ್‌ ಮೂರು ಗ್ಯಾರಂಟಿಯನ್ನು ಘೋಷಿಸಿದ್ದು, ಇದೀಗ ನಾಲ್ಕನೇ ಗ್ಯಾರಂಟಿ ಯೋಜನೆ ಘೋಷಿಸುವ ಮೂಲಕ ಮತದಾರರನ್ನು ಒಲೈಸಲು ವಿವಿಧ ಕಸರತ್ತು ನಡೆಸುತ್ತಿದೆ. ಪ್ರತಿ ಕುಟುಂಬಕ್ಕೆ ಹತ್ತು ಕೆಜಿ ಅಕ್ಕಿ, 200 ಯೂನಿಟ್‌ ಉಚಿತ ವಿದ್ಯುತ್‌, ಕುಟುಂಬದ ಓರ್ವ ಮಹಿಳೆಗೆ 2000 ಸಾವಿರ ರೂ. ನೀಡಲಾಗುವುದು ಎಂದು ಈಗಾಗಲೇ ಘೋಷಿಸಿದೆ.

Related posts

ಅತ್ಯಾಚಾರಕ್ಕೊಳಗಾಗಿದ್ದ 9ನೇ ತರಗತಿ ವಿದ್ಯಾರ್ಥಿನಿ ದುರಂತ ಸಾವು! ಅಪಹರಣದ ಬಳಿಕ ಪ್ರಕರಣ ರಾಜಕೀಯ ತಿರುವು ಪಡೆದದ್ದು ಹೇಗೆ?

ಇನ್ಮುಂದೆ ಸ್ವಸಹಾಯ ಸಂಘಗಳಿಗೆ ಪೆಟ್ರೋಲ್ ಬಂಕ್ ನಿರ್ವಹಣೆ ಹೊಣೆ..! ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

ದೆಹಲಿಯಲ್ಲಿ ಮತದಾನದ ವೇಳೆ ಬಿಜೆಪಿ-ಎಎಪಿ ಕಾರ್ಯಕರ್ತರ ನಡುವೆ ಹೊಡೆದಾಟ..! ಇಲ್ಲಿದೆ ವಿಡಿಯೋ