ಕರಾವಳಿಕೊಡಗು

ಮಡಿಕೇರಿ:ಅಪ್ರಾಪ್ತ ಹಿಂದೂ ಹುಡುಗಿಯರ ಅಪಹರಿಸಿದ ಯುವಕರ ಗ್ಯಾಂಗ್..!,ನಾಲ್ವರು ಅರೆಸ್ಟ್,ಮುಂದುವರಿದ ತನಿಖೆ

ನ್ಯೂಸ್ ನಾಟೌಟ್ :ಕೊಡಗಿನಲ್ಲಿ ಶಾಕಿಂಗ್ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಪಿಯುಸಿ ಓದುತ್ತಿದ್ದ ಅಪ್ರಾಪ್ತ ಹಿಂದೂ ಹುಡುಗಿಯರನ್ನು ನಾಲ್ವರು ಯುವಕರ ಗ್ಯಾಂಗೊಂದು ಅಪಹರಿಸಿದ ಆರೋಪ ಕೇಳಿ ಬಂದಿದೆ.ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಹುಡುಗಿಯರು ಪಿಯುಸಿ ಓದುತ್ತಿದ್ದ ಅಪ್ರಾಪ್ತ ಹುಡುಗಿಯರೆಂದು ತಿಳಿದು ಬಂದಿದೆ. ಹಿಂದೂ ಹುಡುಗಿಯರನ್ನು ಕೊಡಗಿನಿಂದ ಮೈಸೂರಿಗೆ ಯುವಕರು ಅಪಹರಿಸಿ ಕರೆದೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ ಇದನ್ನು ಗಮನಿಸಿದ್ದ ಸ್ಥಳೀಯರು ಕೂಡಲೇ ಫೋನ್ ಕರೆ ಮಾಡಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ನಾಲ್ವರು ಯುವಕರನ್ನು ಅರೆಸ್ಟ್ ಮಾಡಲಾಗಿದೆ. ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.ನಾಲ್ವರು ಆರೋಪಿಗಳು ಪೈಯಿಂಟಿಂಗ್ ಹಾಗೂ ಮತ್ತಿತರೆ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ತಕ್ಷಣ ಎಚ್ಚೆತ್ತ ಪೊಲೀಸರು ಚೇಸಿಂಗ್ ಮಾಡಲು ಮುಂದಾದರು.ಈ ವೇಳೆ ಕುಶಾಲನಗರದಲ್ಲಿ ಬಾಲಕಿಯರನ್ನು ಇಳಿಸಿದ ಯುವಕರು  ಮೈಸೂರಿಗೆ ಎಸ್ಕೇಪ್ ಆಗಿದ್ದಾರೆಂದು ತಿಳಿದು ಬಂದಿದೆ. ಬಳಿಕ ಮೈಸೂರಿನ ಮಂಡಿ ಮೊಹಲ್ಲಾದಿಂದ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸದ್ಯ ನಾಲ್ವರು ಆರೋಪಿಗಳ ಆರೋಗ್ಯ ತಪಾಸಣೆಗೆ  ಪೊಲೀಸರು ಮಡಿಕೇರಿ ಆಸ್ಪತ್ರೆಗೆ ಕರೆತಂದಿದ್ದಾರೆಂದು ತಿಳಿದು ಬಂದಿದೆ.ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ತನಿಖೆ ಮುಂದುವರಿದಿದೆ.

Related posts

ಸುಳ್ಯ:ಅ.3ರಂದು ಗಾಂಧಿ ಸ್ಮೃತಿ , ಬೃಹತ್ ಜನಜಾಗೃತಿ ಜಾಥಾ ಮತ್ತು ಸಮಾವೇಶ;ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿ

ಡಿವೈನ್ ಸ್ಟಾರ್‌ , ಕಾಂತಾರ ‘ಶಿವ’ನ ಕಾರ್ಯಕ್ಕೆ ಭಾರಿ ಮೆಚ್ಚುಗೆ ,ಕೊಟ್ಟ ಮಾತನ್ನು ಉಳಿಸಿದ ಆ ಕೆಲಸ ಯಾವುದು?

ಕಡಬ:ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತ್ಯು