ಕರಾವಳಿಕ್ರೈಂ

ಬ್ರಹ್ಮಾವರ: ಮೀನು ಹಿಡಿಯಲು ತೆರಳಿದ್ದ ನಾಲ್ವರು ನೀರುಪಾಲು

ನ್ಯೂಸ್‌ನಾಟೌಟ್‌: ನದಿಯಲ್ಲಿ ಮೀನು, ಮರುವಾಯಿ ಹಿಡಿಯಲು ಹೋಗಿದ್ದ ನಾಲ್ವರು ನೀರುಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕುಕ್ಕುಡೆ ಕಿಣಿಯರ ಕುದ್ರು ಬಳಿ ಭಾನುವಾರ ಸಾಯಂಕಾಲ ನಡೆದಿದೆ.

ಮೃತಪಟ್ಟವರನ್ನು ಇಬಾಜ್, ಫಜಾನ್, ಸೂಫಾನ್, ಫರಾನ್ ಎಂದು ಗುರುತಿಸಲಾಗಿದ್ದು, ಇವರೆಲ್ಲ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆ, ಶೃಂಗೇರಿ ಮೂಲದವರು ಎಂದು ತಿಳಿದು ಬಂದಿದೆ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬ್ರಹ್ಮಾವರದ ಸಂಬಂಧಿಕರ ಮನೆಗೆ ಬಂದಿದ್ದರು. ದೋಣಿ ಮೂಲಕ ಮೀನು ಹಿಡಿಯಲು ಯುವಕರು ತೆರಳಿದ್ದ ಸಂದರ್ಭ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಬೋಟ್‌ನಲ್ಲಿ ಏಳು ಮಂದಿ ಇದ್ದು, ಸಾಯಂಕಾಲ ಜೋರಾಗಿ ಗಾಳಿ ಬೀಸಿದ ಕಾರಣ ನಿಯಂತ್ರಣ ತಪ್ಪಿ ಬೋಟ್ ಮಗುಚಿದೆ ಎನ್ನಲಾಗಿದೆ. ಈ ಸಂದರ್ಭ ಏಳು ಮಂದಿಯೂ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಮೂವರು ಈಜಿ ದಡ ಸೇರಿದ್ದಾರೆ. ಉಳಿದ ನಾಲ್ವರು ನೀರಿನಲ್ಲಿ ಕಣ್ಮರೆಯಾಗಿದ್ದರು. ಸಾಕಷ್ಟು ಹುಡುಕಾಟದ ಬಳಿಕ ಮೂವರ ಮೃತದೇಹ ಪತ್ತೆಯಾಗಿದ್ದು, ಓರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಮೂವರು ಯುವಕರು ಒಂದೇ ಕುಟುಂಬದ ಸೋದರ, ಸೋದರಿಯರ ಮಕ್ಕಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು, ಅಧಿಕಾರಿಗಳು ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಮೃತದೇಹಗಳನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Related posts

ಮರದ ಕೊಂಬೆ ಕಡಿಯಲು ಹೋಗಿ ವ್ಯಕ್ತಿಗೆ ವಿದ್ಯುತ್ ತಂತಿ ಸ್ಪರ್ಶ,ಸಾವು, ಮರದಲ್ಲಿಯೇ ನೇತಾಡುತ್ತಿತ್ತು ವ್ಯಕ್ತಿಯ ಮೃತದೇಹ!

ಸಂಪಾಜೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆವಳುತ್ತಾ ಸಾಗುತ್ತಿರುವ ತಾಯಿ..! ಈಕೆಯ ಕಷ್ಟಕ್ಕೆ ಕೊನೆಯಿಲ್ಲವೇ..?

ಮಹಿಳೆಗೆ ಮದ್ಯ ಕುಡಿಸಿ, ಹಾಡಹಗಲೇ ಫುಟ್ಪಾತ್ ನಲ್ಲಿ ಅತ್ಯಾಚಾರ..! ತಡೆಯದೆ ವಿಡಿಯೋ ಮಾಡುತ್ತಾ ನಿಂತ ಜನ..!