ಕರಾವಳಿ

ಮಡಿಕೇರಿ: ದೇವಸ್ಥಾನದ ಬೃಹತ್ ಘಂಟೆ ಕದ್ದಿಯುತ್ತಿದ್ದ ಖದೀಮರು ಅಂದರ್

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಗಂಟೆಗಳನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಅವರಿಂದ 750 ಕೆ.ಜಿ ತೂಕದ ವಿವಿಧ ಮಾದರಿಗಳ, ವಿವಿಧ ಲೋಹಗಳ ಗಂಟೆಗಳನ್ನು ವಶಪಡಿಸಿಕೊಂಡಿದ್ದಾರೆ.

‘ಮೈಸೂರಿನ ಕೆಸರೆ ನಿವಾಸಿಗಳಾದ ಒಂದೇ ಕುಟುಂಬಕ್ಕೆ ಸೇರಿದ ಅಮ್ಜದ್ ಅಹಮ್ಮದ್ (37), ಸಮೀವುಲ್ಲಾ (22), ಜುಲ್ಫಿಕರ್ (36) ಹಾಗೂ ಹೈದರ್ (36) ಅವರನ್ನು ಬಂಧಿಸಲಾಗಿದೆ. ಆರೋಪಿಗಳು ಕೊಡಗು, ಮೈಸೂರು, ಹಾಸ‌ನ ಜಿಲ್ಲೆಗಳಲ್ಲಿ ಜನವಸತಿಯಿಂದ ದೂರ ಇರುವ ದೇಗುಲಗಳ ಗಂಟೆಗಳನ್ನು ಕಳವು ಮಾಡುತ್ತಿದ್ದರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Related posts

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜಿಗೆ ರಜೆ ಘೋಷಣೆ

Madikeri:ಕರಿಕೆ ಪ್ರಾ.ಕೃ.ಸ.ಸಂ. ಚುನಾವಣೆ , ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ರಸ್ತೆ ಮೇಲೆ ಗುಂಡಿಯೋ? ಗುಂಡಿ ಮೇಲೆ ರಸ್ತೆಯೋ..?