Uncategorized

ಮದುವೆ ಖುಷಿಯಲ್ಲಿ ರೂ. 500 ನೋಟುಗಳ ಮಳೆ ಸುರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ..! ಇಲ್ಲಿದೆ ನೋಡಿ ವೈರಲ್ ವಿಡಿಯೋ..

ನ್ಯೂಸ್ ನಾಟೌಟ್: ಜನ ಖುಷಿಯನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸುವುದನ್ನು ನೋಡಿದ್ದೇವೆ. ಕೆಲವರು ಸ್ಮೈಲ್ ಮಾಡಿ, ಇನ್ನೂ ಕೆಲವರು ಕಿರುಜಾಡಿ, ಮತ್ತೂ ಕೆಲವರೂ ಕುಣಿದು ಕುಪ್ಪಳಿಸಿ ಹೀಗೆ ನಾನಾ ರೀತಿಯ ಖುಷಿ ಸಂಭ್ರಮವನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಖುಷಿಯನ್ನು ಕಂತೆ-ಕಂತೆ ನೋಟುಗಳನ್ನು ಎಸೆಯುವ ಮೂಲಕ ವ್ಯಕ್ತಪಡಿಸಿ ಭಾರೀ ಸುದ್ದಿಯಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಣದಲ್ಲಿ ವೈರಲ್ ಆಗುತ್ತಿದೆ.

ನೋಟು ಎಸೆದ ಅಧ್ಯಕ್ಷ..!

ಶ್ರೀಮಂತರ ಮದುವೆ ಆಹ್ವಾನ ಎಲ್ಲದರೂ ನಿಮಗೆ ಸಿಕ್ಕರೆ, ನೀವಂತೂ ಮಿಸ್ ಮಾಡಲ್ಲ ಯಾಕಾಂದ್ರೆ ಅಲ್ಲಿ ಸಿಗುವ ಭರ್ಜರಿ ಭೋಜನಗಳು ತಿನ್ನಲು ನೀವು ಕಾಯುತ್ತಾ ಇರ್ತೀರಿ ಅಲ್ವಾ? ಮದುವೆಗೆ ಹೋಗಿ ಹೊಟ್ಟೆ ತುಂಬಾ ಊಟ ಮಾಡಿ, ವಿವಿಧ ರೀತಿಯ ಆಹಾರ ತಿಂದು ಕೌಂಟರ್‌ಗೆ ಹೋಗಿ ಐಸ್‌ಕ್ರೀಮ್, ತಂಪು ಪಾನಿಗಳನ್ನು ಸೇವಿಸಿ ಕೊನೆಗೆ ನಿದ್ರೆಯ ಮೂಡಿನಲ್ಲಿ ಮನೆಗೆ ಹಿಂತಿರುಗುವಿರಿ. ಆದರೆ ಇಲ್ಲೊಂದು ಮದುವೆ ಸಮಾರಂಭದಲ್ಲಿ ಮದುವೆಗೆ ಆಗಮಿಸಿದ ಬಂಧುಗಳಿಗೆ ಭರ್ಜರಿ ಊಟದ ಜತೆಗೆ ರೂ. 500ರ ಕಂತೆ ಕಂತೆ ನೋಟುಗಳನ್ನು ಎಸೆದು ಸಂಭ್ರಮಿಸಲಾಗಿದೆ.

https://twitter.com/AhmedKhabeer_/status/1627135293576081408?s=20

ತಾನು ಮದುವೆಯಾದ ಸಂಭ್ರಮದಿಂದ ಮದುವೆಗೆ ಬಂದ ಬೀಗರಿಗೆಲ್ಲ ನೋಟುಗಳನ್ನು ಎಸೆದ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯ ಕೇಕ್ರಿ ತಹಸಿಲ್‌ನಲ್ಲಿ ರುವ ಅಗೋಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಧ್ಯಕ್ಷರೊಬ್ಬರು ತಮ್ಮ ಸೋದರಳಿಯನ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಿದ್ದಾರೆ. ಊರಿನಲ್ಲಿರುವ ಎಲ್ಲಾರನ್ನು ಕರೆದು ಊಟ ಹಾಕಿದ್ದಾರೆ. ಇಷ್ಟು ಮಾತ್ರವಲ್ಲದೆ ಆ ಮದುವೆಗೆ ಆಗಮಿಸಿದ ಅಪಾರ ಜನರ ಗುಂಪಿಗೆ ಮನೆಯ ಮೇಲಿನಿಂದ ಕರೀಂ ಯಾದವ್ 500 ರೂ. ನೋಟುಗಳ ಕಂತೆಯನ್ನು ಎಸೆದು ಸಂಭ್ರಮಿಸಿದ್ದಾರೆ. ಕಂತೆಗಟ್ಟಲೆ ನೋಟುಗಳನ್ನು ಜನರತ್ತ ಎಸೆಯುತ್ತಿದ್ದಂತೆ, ಜನರು ನಾ ಮುಂದು-ತಾ ಮುಂದು ಎಂದು ನೋಟುಗಳನ್ನು ಹೆಕ್ಕಲು ಮುಂದಾದರು. ಈ ದೃಶ್ಯ ಈಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Related posts

ಎಷ್ಟೋ ವಿದ್ಯಾರ್ಥಿಗಳ ಭವಿಷ್ಯ ಬರೆದಿದ್ದ ರೆನಾಲ್ಡ್ಸ್‌ ಪೆನ್ ಮಾರಾಟ ಸ್ಥಗಿತ? ಈ ಕುರಿತಂತೆ ಕಂಪೆನಿ ಕೈಗೊಂಡ ನಿರ್ಧಾರವೇನು?

‘ಹುಡುಗಿ ಸಿಗಲಿಲ್ಲ’ವೆಂದು ಆದಿಚುಂಚನಗಿರಿ ಮಠಕ್ಕೆ ಯುವಕರ ಪಾದಯಾತ್ರೆ..!,30 ವರ್ಷ ಮೇಲ್ಪಟ್ಟ ಯುವಕರ ಒತ್ತಾಯವೇನು?

ಸುಬ್ರಹ್ಮಣ್ಯ : ರಥ ಬೀದಿಯಲ್ಲಿ ಬೀದಿ ನಾಯಿಗಳದ್ದೇ ದರ್ಬಾರು..!