ಕೊಡಗುಸುಳ್ಯ

ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧದ ಕೊರಡು ವಶ

ನ್ಯೂಸ್ ನಾಟೌಟ್: ಶ್ರೀಗಂಧದ ತುಂಡುಗಳನ್ನು ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಮಡಿಕೇರಿ ಉಪವಲಯ ಅರಣ್ಯ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಕೆಲವು ದಿನಗಳಿಂದ ತಂಡವೊಂದು ಅರಣ್ಯದ ಪ್ರದೇಶದ ಸಮೀಪ ಸುತ್ತಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಮೇಕೇರಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಕಾರು ಸಹಿತ 3 ಲಕ್ಷ ರೂ. ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಆರೋಪಿ ಅರ್ವತ್ತೋಕ್ಲು ಗ್ರಾಮದ ನಿವಾಸಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಡಿಕೇರಿ ವಿಭಾಗದ ಡಿಸಿಎಫ್ ಎ. ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಮೋಷಿನ್ ಬಾಷಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಡಿಆರ್‌ಎಫ್‌ಒಗಳಾದ ಬಾಬು ರಾಥೋಡ್, ಮಲ್ಲಯ್ಯ ಹಿರೇಮಠ, ಗಸ್ತು ಅರಣ್ಯ ವೀಕ್ಷಕ ವಾಸುದೇವ, ವಾಹನ ಚಾಲಕ ಸಂಜು, ಮೋಹನ್ ಕುಶ ಮತ್ತಿತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

Related posts

ಸಂಪಾಜೆ: ಮನೆಯೊಳಗೆ ನುಗ್ಗಿ ಕಳ್ಳರ ಕೈ ಚಳಕ ಪ್ರಕರಣ, ಸ್ಥಳೀಯರಿಂದಲೇ ಕೃತ್ಯದ ಶಂಕೆ, ಪೊಲೀಸರಿಗೆ ಸಿಕ್ಕ ಆ ಸುಳಿವು ಯಾವುದು..?

ಕೆವಿಜಿ ಮೆಡಿಕಲ್ ಕಾಲೇಜಿನ ಮುಕುಟಕ್ಕೆ ಹಲವು ರ‍್ಯಾಂಕ್‌ಗಳ ಗರಿ , 2023-24ನೇ ಸಾಲಿನ ವೈದ್ಯಕೀಯ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಪ್ರಚಂಡ ಸಾಧನೆ

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಭ್ರಮದ ಓಣಂ ಆಚರಣೆ – “ARRPO 2k24”