ಸುಳ್ಯ: ತರಕಾರಿ ಸಾಗಾಟ ಲಾರಿಯಲ್ಲಿ ಹುಣಸೂರುವಿನಿಂದ ಕೇರಳಕ್ಕೆ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದಾಗ ಸಂಪಾಜೆಯಲ್ಲಿ ಸಿಕ್ಕಿ ಬಿದ್ದ ಪ್ರಕರಣ ನಡೆದಿದೆ. ಸಂಪಾಜೆ ಪ್ರಾದೇಶಿಕ ವಲಯ ಅರಣ್ಯ ತನಿಖಾ ಠಾಣೆ ಸಿಬ್ಬಂದಿ ಅಕ್ರಮ ಮರ ಸಾಗಾಟ ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕುರುಚಿಯಲ್ ನಿವಾಸಿ ದಿನೇಶನ್ (28) ಮತ್ತು ಕಣ್ಣೂರು ನಿವಾಸಿ ಎಂ.ರಾಹುಲ್ (26) ಎಂದು ಗುರುತಿಸಲಾಗಿದೆ.ಪ್ರಮುಖ ಆರೋಪಿ ವಿರಾಜಪೇಟೆಯ ನಿವಾಸಿ ಅಶ್ರಫ್ (ಅಚ್ಚು) ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಲಾರಿ ಹಾಗೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ 23 ಬೀಟಿ ಮರದ ನಾಟ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.