ದೇಶ-ಪ್ರಪಂಚ

ಕಪ್ಪು ಪಟ್ಟಿ ಇರುವ ಅಪರೂಪದ ಬ್ಲಾಕ್ ಟೈಗರ್ಸ್​ ಕಂಡಿದ್ದೀರಾ? ಅಪರೂಪ ತಳಿಯ ಹುಲಿಗಳ ಓಡಾಟ ದೃಶ್ಯಗಳು ಕ್ಯಾಮಾರಾದಲ್ಲಿ ಸೆರೆ

ನ್ಯೂಸ್ ನಾಟೌಟ್‌: ನಿಮ್ಗೆಲ್ಲಾ ಹುಲಿ ಕಲರ್ ಯಾವ ರೀತಿ ಇರುತ್ತೆ ಅನ್ನೋದು ಚೆನ್ನಾಗಿ ತಿಳಿದಿದೆ.ಆದರೆ ಈ ಹುಲಿ ಮಾತ್ರ ನೀವಂದು ಕೊಂಡ ಹಾಗೆ ಇರುವ ಹುಲಿಗಳಲ್ಲ ಬದಲಾಗಿ ಬಹಳ ಅಪರೂಪವಾಗಿ ಕಂಡು ಬರುವ ಕಪ್ಪು ಹುಲಿಗಳು.. ಹೌದು, ಒಡಿಶಾದಲ್ಲಿ ಪತ್ತೆಯಾದ ಈ ಹುಲಿ ಕಂಡು ಎಲ್ಲರೂ ನಿಬ್ಬೆರಗಾಗಿದ್ದಾರೆ. ಸಿಮ್ಲಿಪಾಲ್‌ನಲ್ಲಿ ಸ್ಯೂಡೋ-ಮೆಲನಿಸ್ಟಿಕ್ ಎನ್ನುವ ಈ ಅಪರೂಪ ತಳಿಯ ಹುಲಿಗಳ ಓಡಾಟ ದೃಶ್ಯಗಳು ಕ್ಯಾಮಾರಾದಲ್ಲಿ ಸೆರೆಯಾಗಿದೆ.

ಈ ಹುಲಿಗಳು ಗಾಢವಾದ ಕಪ್ಪು ಪಟ್ಟಿಯನ್ನ ಹೊಂದಿರೋದ್ರಿಂದ ಇವುಗಳನ್ನ ಕಪ್ಪು ಹುಲಿಗಳು ಎಂದೇ ಕರೆಯಲಾಗುತ್ತೆ. ಈ ಹುಲಿಗಳ ಪೋಟೋಗಳನ್ನ ಐಎಫ್ಎಸ್​ ಅಧಿಕಾರಿ ಪರ್ವೀನ್ ಕಸ್ವಾನ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಅಪರೂಪದ ಹುಲಿಗಳು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿವೆ.

ಈ ಹಿಂದೆಯೂ ಅಂದರೆ ಕೆಲ ವರ್ಷಗಳ ಹಿಂದೆ 1993ರಲ್ಲಿ ಪಿದಗಡ್​ (Pdagad)ನಲ್ಲಿ ಕಪ್ಪು ಹುಲಿ ಪತ್ತೆಯಾಗಿತ್ತು. ಯುವಕನೊಬ್ಬ ಆತ್ಮ ರಕ್ಷಣೆಗಾಗಿ ಆ ಹುಲಿಯನ್ನು ಬಾಣಗಳಿಂದ ಹೊಡೆದು ಹಾಕಿದ್ದ. 2007ರಲ್ಲಿಯೂ ಕೂಡ ಅದೇ ರೀತಿಯ ಮತ್ತೊಂದು ಹುಲಿ ಪತ್ತೆಯಾಗಿರುವ ಬಗ್ಗೆ ಅದೇ ಯುವಕ ತಿಳಿಸಿದ್ದ. ಬಳಿಕ ಕಪ್ಪು ಹುಲಿ ಪತ್ತೆಯಾಗಿರೋದು ಇದೇ ಮೊದಲು ಎಂದು ಹೇಳಲಾಗುತ್ತಿದೆ.ಇದೀಗ ಈ ಫೋಟೋಗಳು ವೈರಲಾಗುತ್ತಿದ್ದು,ನಾನಾ ಕಾಮೆಂಟ್‌ಗಳನ್ನು ನೆಟ್ಟಿಗರು ಹಾಕುತ್ತಾ ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.

Related posts

ಮಹಡಿಯಲ್ಲಿ ಸಿಕ್ಕಿಕೊಂಡಿದ್ದ ಮಗುವಿನ ರಕ್ಷಣೆಯ ಬೆನ್ನಲ್ಲೇ ತಾಯಿ ಆತ್ಮಹತ್ಯೆ..! ಸಾವಿನ ಹಿಂದಿದೆಯಾ ಆ ವೈರಲ್ ವಿಡಿಯೋ ಪ್ರಭಾವ..?

ಹಾಸ್ಟೆಲ್ ನಲ್ಲಿ ರ‍್ಯಾಗಿಂಗ್ ಗೆ ವಿದ್ಯಾರ್ಥಿನಿ ಬಲಿ! ನೇಣು ಬಿಗಿದ ಸ್ಥಿತಿಯಲ್ಲಿ ಹಾಸ್ಟೆಲ್ ಕೋಣೆಯಲ್ಲಿ ಶವ ಪತ್ತೆ!

ಸೆಕೆಂಡ್ ಹ್ಯಾಂಡ್ ಮಂಚ ನೀಡಿದಕ್ಕೆ ಮದುವೆ ನಿರಾಕರಿಸಿದ ವರ, ಘಟನೆಗೆ ಟ್ವಿಸ್ಟ್ ನೀಡಿದ ವಧು !