ಕ್ರೈಂವೈರಲ್ ನ್ಯೂಸ್

ಕ್ರಿಮಿನಾಶಕ ಸೇವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ! ಸಂಬಂಧಿಕರನ್ನೇ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದ್ದನಾ ಅಧಿಕಾರಿ? ಏನಿದು ಅಧಿಕಾರಿಯ ಮೇಲಿನ ಆರೋಪ?

ನ್ಯೂಸ್ ನಾಟೌಟ್ : ಚಾಲಕ ವೃತ್ತಿ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬ ಅಧಿಕಾರಿಯ ಕಿರುಕುಳವನ್ನು ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹ* ತ್ಯೆಗೆ ಯತ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ವಿನೋದ್ ಎಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್‌ನ ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ಕ್ರಿಮಿನಾಶಕ ಸೇವಿಸಿ ನಿತ್ರಾಣಗೊಂಡಿದ್ದ. ಇದನ್ನೂ ಗಮನಿಸಿದ ಇತರೆ ಸಹೋದ್ಯೋಗಿಗಳು ಕೂಡಲೇ ಆಸ್ಪತ್ರೆಗೆ ಸೇರಿಸಿದ್ದಾರೆ.

ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಹುಣಸೂರು ತಾಲೂಕಿನ ಸಿಂಗರ ಮಾರನಹಳ್ಳಿ ಗ್ರಾಮದ ವಿನೋದ್ (24) ಪ್ರಾಣ ಕಳೆದುಕೊಳ್ಳಲು ಯತ್ನಿಸಿ‌ದವನು ಎಂದು ತಿಳಿದುಬಂದಿದೆ.ಜೀಪ್‌ ಡ್ರೈವರ್‌ ಆಗಿದ್ದ ವಿನೋದ್‌ಗೆ ಜೀಪ್ ಟೈರ್ ಪಂಚರ್ ಆಗಿದ್ದಕ್ಕೆ ಡಿಆರ್‌ಎಫ್‌ಒ ನವೀನ್ ಎಂಬಾತ ಹಲ್ಲೆ ಮಾಡಿದ್ದ ಎನ್ನಲಾಗಿದೆ.

ಈ ಘಟನೆಯಿಂದ ಬೇಸೆತ್ತು ವಿನೋದ್‌ ಕ್ರಿಮಿನಾಶಕ ಸೇವಿಸಿದ್ದಾನೆ ಎಂದು ವರದಿ ತಿಳಿಸಿದೆ.ಇನ್ನು 15 ಮಂದಿ‌ ಆನೆ ಕಾವಲು ಪಡೆಯಲ್ಲಿ 10 ಮಂದಿಯನ್ನು ನಿಯೋಜಿಸಿ ಉಳಿದ 6 ಮಂದಿ ತಮ್ಮ ಸಂಬಂಧಿಕರನ್ನೇ ಕರ್ತವ್ಯಕ್ಕೆ ನಿಯೋಜಿಸಿಕೊಂಡಿದ್ದಾರೆ.

ಅವರು ಕರ್ತವ್ಯಕ್ಕೆ ಬಾರದೆ ಇದ್ದರೂ ವೇತನ ನೀಡುತ್ತಿದ್ದಾರೆ ಎಂದು ಇತರೆ ತಂಡದ ಸದಸ್ಯರು ಆರೋಪಿಸಿದ್ದಾರೆ. ಸಣ್ಣ ಪುಟ್ಟ ವಿಚಾರಗಳಿಗೂ ಆನೆ ಕಾವಲು ಪಡೆ ತಂಡದ ಯುವಕರಿಗೆ ನವೀನ್ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

Related posts

ಗದ್ದೆಗೆ ದೀಪದ ಬೆಳಕು ತೋರಿಸಲು ಹೋಗಿದ್ದ ಯುವಕನಿಗೆ ವಿಷ ಜಂತು ಕಡಿದು ಸಾವು

ಅಂಪೈರ್ ತೀರ್ಪಿನಿಂದ ಫುಟ್‌ ಬಾಲ್ ಮೈದಾನದಲ್ಲೇ ಹೊಡೆದಾಟ..! 100 ಮಂದಿ ಸಾವು..!

ಸುಳ್ಯ: ಅತೀ ವೇಗದಿಂದ ವಾಹನ ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ, ಸ್ಕೂಟಿ ಚಾಲಕನಿಗೆ ಕಲ್ಲಿನಿಂದ ಗುದ್ದಿದ ಆಟೋ ಚಾಲಕ