ನ್ಯೂಸ್ ನಾಟೌಟ್ : ಸ್ವಿಗ್ಗಿ, ಝೊಮ್ಯಾಟೋದಂತಹ ಫುಡ್ ಡೆಲಿವರಿ ಆಪ್ಲಿಕೇಷನ್‌ಗಳಲ್ಲಿ ತಮ್ಮಿಷ್ಟದ ಆಹಾರ ಆರ್ಡರ್ ಮಾಡುವುದು ಈಗ ವಾಡಿಕೆ. ಆದ್ರೆ ಕೆಲವೊಂದು ಬಾರಿ ಟ್ರಾಫಿಕ್ ಇತ್ಯಾದಿ ಕಾರಣಗಳಿಂದ ಸಮಯಕ್ಕೆ ಸರಿಯಾಗಿ ಆರ್ಡರ್ ಆಗುವುದಿಲ್ಲ. ಆದರೆ, ಚೀನಾದಲ್ಲಿ ಇದ್ಯಾವುದೇ ಟೆನ್ಷನ್ ಇಲ್ಲ. ಅಲ್ಲಿ ಗ್ರಾಹಕರು ಆರ್ಡರ್ ಮಾಡದಂತಹ ಆಹಾರಗಳನ್ನು ಡ್ರೋನ್ ಮೂಲಕ ಡೆಲಿವರಿ ಮಾಡಲಾಗುತ್ತದೆ. ಚೀನಾದ ಈ ಹೈಟೆಕ್ ಫುಡ್ ಡೆಲಿವರಿ ಪದ್ಧತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಹಿಳೆಯೊಬ್ಬರು ಚೀನಾದಲ್ಲಿರುವ ಹೈಟೆಕ್ ಫುಡ್ ಡೆಲಿವರಿ ವ್ಯವಸ್ಥೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಹೊಟೇಲ್, ರೆಸ್ಟೋರೆಂಟ್ ಇಲ್ಲದ ದೂರದ ಜಾಗದಲ್ಲಿಯೂ ಹೇಗೆ, ಯಾವ ರೀತಿ ಫುಡ್ ಡೆಲಿವರಿ ಬಾಯ್ಸ್ ಇಲ್ಲದೆ ಬರೀ ಡ್ರೋನ್ ಮೂಲಕ ಫುಡ್ ಡೆಲಿವರಿ ಮಾಡಲಾಗುತ್ತದೆ ಎಂಬುದನ್ನು ಹೇಳಿದ್ದಾರೆ.
ಇಲ್ಲಿದೆ ವಿಡಿಯೋ: https://www.instagram.com/reel/DFMXPYFPgzK/?utm_source=ig_web_copy_link
ಈ ಕುರಿತ ವಿಡಿಯೋವೊಂದನ್ನು midiforreal ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ವೈರಲ್ ವಿಡಿಯೋದಲ್ಲಿ ಡ್ರೋನ್ ಮೂಲಕ ಹೇಗೆ ಫುಡ್ ಡೆಲಿವರಿ ಮಾಡಲಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಜನವರಿ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 14.4 ಮಿಲಿಯನ್ ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
Click
ವಿವಿಗೆ ನ್ಯಾಕ್ ಗ್ರೇಡ್ ಕೊಡುವ ವಿಚಾರದಲ್ಲಿ ಲಂಚ ಸ್ವೀಕಾರ..! ಪ್ರಾಧ್ಯಾಪಕಿ ಸಹಿತ 10 ಮಂದಿ ಅರೆಸ್ಟ್..!
ಮೆಣಸಿನ ಬಜ್ಜಿ ಮಾಡಿ ತಿಂದು ಚಿನ್ನ ಹಣ ಕದ್ದೊಯ್ದ ಕಳ್ಳರು..! ಗ್ಯಾಸ್ ಸಿಲಿಂಡರ್ ಗಳೂ ನಾಪತ್ತೆ..!