ಜೀವನಶೈಲಿ

ತಾಯಿ-ಮಗನನ್ನು ಒಂದುಗೂಡಿಸಿದ ಪ್ರವಾಹ..!,35 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದು ಹೇಗೆ?

ನ್ಯೂಸ್ ನಾಟೌಟ್ : ಪ್ರಾಕೃತಿಕ ವಿಕೋಪ ಅಥವಾ ಪ್ರವಾಹಗಳು ಎದುರಾದಾಗ ಎಷ್ಟೋ ಕುಟುಂಬಗಳು ದಿಕ್ಕು ಪಾಲಾಗಿದ್ದು, ಮನಸ್ಸು ಕರಗುವಂತಹ ಘಟನೆಗಳು ನಡೆದ ಉದಾಹರಣೆಗಳಿವೆ.ಆದರೆ ಪ್ರವಾಹದ ಕಾರಣಕ್ಕೆ ಹಲವು ವರ್ಷಗಳ ಬಳಿಕ ತಾಯಿ-ಮಗ ಒಂದಾದ ಅಪರೂಪಗಳಲ್ಲಿ ಅಪರೂಪವೆಂಬಂತಹ ಘಟನೆಯೊಂದು ನಡೆದಿದೆ.

ತಾಯಿ ಹಾಗೂ ಮಗ ಬರೋಬ್ಬರಿ 35 ವರ್ಷಗಳ ಬಳಿಕ ಮತ್ತೆ ಪರಸ್ಪರ ನೋಡುವಂತಾಗಲು ಪ್ರವಾಹವೇ ಪ್ರಮುಖ ಕಾರಣವಾಗಿದ್ದು ವಿಶೇಷವೆಂಬಂತಿದೆ. ಹೌದು, ಪಂಜಾಬ್​ನ ಪಟಿಯಾಲಾದಲ್ಲಿ ಈ ಪ್ರಕರಣ ನಡೆದಿದ್ದು, ಜಗಜಿತ್ ಸಿಂಗ್ ಎಂಬ 37 ವರ್ಷದ ವ್ಯಕ್ತಿ 35 ವರ್ಷಗಳ ಬಳಿಕ ತಾಯಿಯನ್ನು ನೋಡುವಂತಹ ಭಾಗ್ಯ ಒದಗಿ ಬಂದಿದೆ.

ಜಗಜಿತ್ ಸಿಂಗ್​​ ಅವರಿಗೆ 2 ವರ್ಷವಿದ್ದಾಗ ತಂದೆ ತೀರಿಹೋಗಿದ್ದರು.ಈ ಹಿನ್ನಲೆಯಲ್ಲಿ ತಾಯಿ ಎರಡನೇ ಮದುವೆಯಾಗಿದ್ದರು. ಆ ಬಳಿಕ ಜಗಜಿತ್ ಸಿಂಗ್ ಅವರ ಅಜ್ಜ-ಅಜ್ಜಿ ಆತನನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಬೆಳೆಸಿದ್ದು, ನಿನ್ನ ತಂದೆ ತಾಯಿ ಅಪಘಾತದಲ್ಲಿ ತೀರಿಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದರು.ಇದನ್ನೇ ನಂಬಿಕೊಂಡಿದ್ದ ಬಾಲಕ ಕಳೆದ 37 ವರ್ಷಗಳಿಂದ ಜೀವನ ನಡೆಸುತ್ತಿದ್ದ..!

ಆದರೆ ಇತ್ತೀಚೆಗೆಷ್ಟೇ ಪಂಜಾಬ್​ನ ಪಟಿಯಾಲದ ಪ್ರವಾಹಪೀಡಿತ ಪ್ರದೇಶವೊಂದಕ್ಕೆ ರಕ್ಷಣಾ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಜಗಜಿತ್ ಆಗಮಿಸಿದ್ದ.೨ ವರ್ಷ ಬಾಲಕನಾಗಿದ್ದಾಗ ಪಟಿಯಾಲದ ಬೊಹರ್​ಪುರ ಗ್ರಾಮದಲ್ಲಿ ತಾಯಿಯ ತಂದೆ-ತಾಯಿ ಇದ್ದರು ಎಂದು ಸಂಬಂಧಿಕರೊಬ್ಬರು ಹೇಳುತ್ತಿದ್ದುದನ್ನು ನೆನಪಿಸಿಕೊಂಡ ಜಗಜಿತ್ ಆ ಗ್ರಾಮವನ್ನು ಅರಸಿಕೊಂಡು ಹೋಗಿ ವಿಚಾರಿಸಿದ್ದ ಎಂದು ತಿಳಿದು ಬಂದಿದೆ.

ಬಳಿಕ ತಾನು ಹುಡುಕುತ್ತಿದ್ದ ಮನೆಯ ವಿಳಾಸ ಸಿಕ್ಕಾಗ ಅಲ್ಲಿ ಮಂಚದ ಮೇಲೆ ಮಲಗಿದ್ದ ವೃದ್ಧೆಯೊಬ್ಬಳ ಬಳಿ ವಿಚಾರಿಸಿದ ಜಗಜಿತ್.ಕೊನೆಗೂ ಆಕೆಯೇ ತನ್ನ ತಾಯಿಯ ತಾಯಿ ಎಂಬುದು ಗೊತ್ತಾಗಿದೆ. ತನ್ನ ತಾಯಿಯ ತಂದೆ-ತಾಯಿ ಜೀವಂತ ಇದ್ದರು, ಆದರೆ ವೈಮನಸ್ಯದ ಕಾರಣಕ್ಕೆ ನಾವು ಮಾತಾಡುತ್ತಿಲ್ಲ ಎಂದು ಅಜ್ಜ-ಅಜ್ಜಿ ಹೇಳುತ್ತಿದ್ದುದನ್ನು ಜಗಜಿತ್ ಹೇಳಿಕೊಂಡಿದ್ದ.

ಸಂಬಂಧಿಯೊಬ್ಬರು ಬೊಹರ್​ಪುರ ಎಂಬ ಗ್ರಾಮದ ಕುರಿತು ಹೇಳುತ್ತಿದ್ದದ್ದು ನೆನಪಿದ್ದರಿಂದ ಹುಡುಕಿಕೊಂಡು ಬಂದೆ ಎಂದ ಜಗಜಿತ್​​ಗೆ ಕೊನೆಗೂ 35 ವರ್ಷಗಳ ಬಳಿಕ ತಾಯಿಯ ದರ್ಶನವಾಗಿದೆ. ಜಗಜಿತ್ ತನ್ನ ಈ ಭಾವುಕ ಕ್ಷಣಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ.

Related posts

ಅರ್ಧ ಹೆಣ್ಣು, ಅರ್ಧ ಗಂಡು ಹಕ್ಕಿಯನ್ನು ಎಲ್ಲಾದರೂ ನೋಡಿದ್ದೀರಾ? 100 ವರ್ಷ ಅಪರೂಪದ ಅನ್ವೇಷಣೆಯಲ್ಲಿ ಪತ್ತೆಯಾದ ಈ ಹಕ್ಕಿಯ ವಿಶೇಷತೆಗಳೇನು?

ಕರ್ನಾಟಕದಲ್ಲಿ 28,657 ಬಾಲ ಗರ್ಭಿಣಿಯರು..! ಈ ಬಗ್ಗೆ ಸರ್ಕಾರ ನೀಡಿದ ಎಚ್ಚರಿಕೆಗಳೇನು..?

ಮಹಿಳೆಯರೇ ಗಮನಿಸಿ,ನೀವು ಎಂದಿಗೂ ಈ ತಪ್ಪನ್ನು ಮಾಡಲೇ ಬಾರದು…