ಕರಾವಳಿ

ಪ್ರತಿಕೂಲ ಹವಾಮಾನ ಹಿನ್ನೆಲೆ ಬೆಂಗಳೂರು-ಮಂಗಳೂರು ವಿಮಾನ ಸಂಚಾರದಲ್ಲಿ ವ್ಯತ್ಯಯ,ಮಂಗಳೂರು ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಕಣ್ಣೂರಿಗೆ ಡೈವರ್ಟ್!

ನ್ಯೂಸ್ ನಾಟೌಟ್ :ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಬೆಂಗಳೂರು-ಮಂಗಳೂರು ವಿಮಾನ ಸಂಚಾರದಲ್ಲಿ ವ್ಯತ್ಯಯಗೊಂಡಿದ್ದು,ಮಂಗಳೂರು ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನ ಕಣ್ಣೂರಿಗೆ ಡೈವರ್ಟ್ ಆಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ.

ಬೆ.11 ಗಂಟೆಗೆ ಮಂಗಳೂರು ಏರ್ಪೋರ್ಟ್ ನಲ್ಲಿ‌ ಲ್ಯಾಂಡ್ ಆಗಬೇಕಿದ್ದ ಇಂಡಿಗೋ ವಿಮಾನವು ಬೆಂಗಳೂರಿನಿಂದ 9.55ಕ್ಕೆ ಹೊರಟಿತ್ತು.ಪ್ರತಿಕೂಲ ಹವಾಮಾನ ಹಿನ್ನೆಲೆ ಕೇರಳದ ಕಣ್ಣೂರು ಏರ್ಪೋರ್ಟ್ ನಲ್ಲಿ ಲ್ಯಾಂಡ್ ಆಗಿದೆಯೆಂಬ ಮಾಹಿತಿ ಲಭ್ಯವಾಗಿದೆ.ವಿಮಾನದಲ್ಲಿ ಆರೋಗ್ಯ ಸಚಿವ, ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರು ಕೂಡ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಸದ್ಯ ಹವಾಮಾನ ಬದಲಾವಣೆ ಬೆನ್ನಲ್ಲೇ ಮಂಗಳೂರು ಏರ್ಪೋರ್ಟ್ ನಲ್ಲಿ ಲ್ಯಾಂಡಿಂಗ್ ಗೆ ಅನುಮತಿ ಸಿಕ್ಕಿದ್ದು,ಇದೀಗ ವಿಮಾನವು ಮತ್ತೆ ಮಂಗಳೂರು ಏರ್ಪೋರ್ಟ್ ನತ್ತ ಟೇಕಾಫ್ ಆಗಿದ್ದು,ಮಂಗಳೂರು ಏರ್ಪೋರ್ಟ್ ನಲ್ಲಿ‌ ಲ್ಯಾಂಡಿಂಗ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Related posts

‘ಇನ್ನು ಮುಂದೆ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ’ ಕನ್ನಡದ ಬದಲಿಗೆ ಇಂಗ್ಲೀಷ್​​ನಲ್ಲೇ ಪ್ರಮಾಣ ವಚನ ಸ್ವೀಕರಿಸಿ ಟ್ರೋಲ್ ಆಗಿದ್ದ ಸಚಿವ ಜಮೀರ್ ಖಾನ್​​​​​​ ಹೊಸ ಆದೇಶ..!

24 ಗಂಟೆಯೊಳಗೆ ನಿವೃತ್ತಿ ಘೋಷಿಸಿ,ಇಲ್ಲವಾದರೆ ಕ್ರಮ ಎದುರಿಸಲು ಸಿದ್ಧರಾಗಿ ಎಂದು ರಘುಪತಿಗೆ ಭಟ್‌ಗೆ ಬಿಜೆಪಿ ಎಚ್ಚರಿಕೆ..! ಪಕ್ಷಕ್ಕೆ ಮುಜುಗರ ತಂದೊಡ್ಡುವುದು ಸರಿಯಲ್ಲ ಎಂದ ಬಿಜೆಪಿ ಜಿಲ್ಲಾಧ್ಯಕ್ಷ..!

ಬೆಳ್ಳಾರೆ:ಅಡಿಕೆ ಕಳವು ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ತಲವಾರಿನಿಂದ ಬೀಸಿದ ಕಳ್ಳ..!ಮಾಲೀಕನ ಪುತ್ರನ ಕೈಗೆ ಗಾಯ,ಸಿಕ್ಕಿ ಬಿದ್ದ ಓರ್ವ ಕಳ್ಳ..!ಏನಿದು ಘಟನೆ?ಕಳ್ಳ ಬಾಯ್ಬಿಟ್ಟಿದ್ದೇನು?