ದೇಶ-ವಿದೇಶ

ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದವರು ಜೈಲಿನ ಕಂಬಿಗಳನ್ನೇ ಮುರಿದು ಪರಾರಿ..!, 20 ಅಡಿ ಎತ್ತರದ ಗೋಡೆಯಿದ್ದರೂ ಎಸ್ಕೇಪ್‌ ಆಗಿದ್ದು ಹೇಗೆ..?

ನ್ಯೂಸ್‌ ನಾಟೌಟ್‌: ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದ ಐವರು ವಿಚಾರಣಾಧೀನ ಕೈದಿಗಳು ಜೈಲಿನ ಕಂಬಿಗಳನ್ನೇ ಮುರಿದು ಪರಾರಿಯಾದ ಘಟನೆ ಅಸ್ಸಾಂನ ಮೊರಿಗಾಂವ್ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಕೈದಿಗಳು ತಡರಾತ್ರಿ 1 ರಿಂದ 2 ಗಂಟೆಯ ನಡುವೆ ಜೈಲಿನ ಕಂಬಿಗಳನ್ನು ಮುರಿದು ಪರಾರಿಯಾಗಿದ್ದಾರೆ ಎಂದು ಮೊರಿಗಾಂವ್‌ನ ಜಿಲ್ಲಾಧಿಕಾರಿ ದೇವಶಿಶ್ ಶರ್ಮಾ ತಿಳಿಸಿದ್ದಾರೆ.

ತಮ್ಮ ಸೆಲ್‌ನ ಕಬ್ಬಿಣದ ಗ್ರಿಲ್ ಅನ್ನು ಮುರಿದು, ಬೆಡ್ ಶೀಟ್‌ಗಳು, ಬ್ಲಾಂಕೆಟ್‌ಗಳು ಮತ್ತು ಲುಂಗಿಗಳನ್ನು ಬಳಸಿ ಹಗ್ಗವನ್ನು ತಯಾರಿಸಿ ಜೈಲಿನ 20 ಅಡಿ ಎತ್ತರದ ಗೋಡೆಯಿಂದ ಜಿಗಿದು ಪರಾರಿಯಾಗಿದ್ದಾರೆ. ಪರಾರಿಯಾದ ಕೈದಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ. ಅಲ್ಲದೇ ಜೈಲಿನ ಭದ್ರತಾ ಸಿಬ್ಬಂದಿಯಿಂದ ಲೋಪವಾಗಿದೆಯೇ? ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Related posts

ಇಂದು(ಜ.8)ಶರಣಾಗತಿಯಾಗುತ್ತಿರುವ ನಕ್ಸಲರಿಗೆ ರಾಜ್ಯ ಸರ್ಕಾರದಿಂದ ಪ್ಯಾಕೇಜ್ ಘೋಷಣೆ..! ಸಿದ್ದರಾಮಯ್ಯ ಸಮ್ಮುಖದಲ್ಲೇ ಸಿಎಂ ಗೃಹ ಕಚೇರಿಯಲ್ಲಿ ಶರಣಾಗತಿ..!

ವಿಜಯ್ ಮಲ್ಯ ವಿರುದ್ಧ ಮತ್ತೊಂದು ಜಾಮೀನು ರಹಿತ ವಾರಂಟ್..! ಇಂಡಿಯನ್ ಓವರ್​ಸೀಸ್ ಬ್ಯಾಂಕ್ ​ನಿಂದ 180 ಕೋಟಿ ರೂ. ವಂಚನೆ..!

ಅಮೆರಿಕದ ಶ್ವೇತಭವನದ ಮೇಲೆ ಬೃಹತ್ ಟ್ರಕ್ ಮೂಲಕ ದಾಳಿಗೆ ಯತ್ನಿಸಿದ್ದ ಭಾರತ ಮೂಲದ ಯುವಕ..! 8 ವರ್ಷ ಜೈಲು..!