Uncategorized

ವಿಷಯುಕ್ತ ತ್ಯಾಜ್ಯ ನೀರು ಕೆರೆಗೆ, ಸತ್ತು ಬಿದ್ದ 2 ಟನ್ ಮೀನುಗಳು

ನ್ಯೂಸ್ ನಾಟೌಟ್: ಬಿಡದಿ ಕೈಗಾರಿಕಾ ವಲಯದ ಪ್ರತಿಷ್ಠಿತ ಕಾರ್ಖಾನೆಗಳು ವಿಷ ಪೂರಿತ ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ಹಳ್ಳಕ್ಕೆ ಹರಿ ಬಿಡುತ್ತಿವೆ. ಹಳ್ಳ ಸೇರಿದ ತ್ಯಾಜ್ಯ ನೇರವಾಗಿ ಕೆರೆ ಸೇರಿ, ಕೆರೆಯ ನೀರು ಕಲುಷಿತಗೊಂಡು ಜಲಚರಗಳಿಗೆ ಹಾಗೂ ಗ್ರಾಮಸ್ಥರಿಗೆ ಮಾರಕವಾಗಿ ಪರಿಣಮಿಸಿದೆ.

ರಾಮನಗರ ಜಿಲ್ಲೆಯಲ್ಲೇ ಬಿಡದಿ ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಬೃಹತ್ ಕೈಗಾರಿಕಾ ಪ್ರದೇಶ ಇದಾಗಿದ್ದು ಪ್ರತಿಷ್ಠಿತ ಕಾರ್ಖಾನೆಗಳು ತಲೆ ಎತ್ತಿ ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಆದರೆ ಕೆಲ ಕಾರ್ಖಾನೆಗಳು ತಮ್ಮಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಯುಕ್ತ ತಾಜ್ಯದ ನೀರನ್ನು ಸಂಸ್ಕರಣೆ ಮಾಡದೆ ಹೊರ ಬಿಟ್ಟು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿವೆ.

ಕೈಗಾರಿಕಾ ವಲಯದ ಅಬ್ಬನಕುಪ್ಪೆಬಿಡದಿ ಕೈಗಾರಿಕಾ ವಲಯದ ಪ್ರತಿಷ್ಠಿತ ಕಾರ್ಖಾನೆಗಳು ವಿಷ ಪೂರಿತ ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ಹಳ್ಳಕ್ಕೆ ಹರಿ ಬಿಡುತ್ತಿವೆ. ಹಳ್ಳ ಸೇರಿದ ತ್ಯಾಜ್ಯ ನೇರವಾಗಿ ಕೆರೆ ಸೇರಿ, ಕೆರೆಯ ನೀರು ಕಲುಷಿತಗೊಂಡು ಜಲಚರಗಳಿಗೆ ಹಾಗೂ ಗ್ರಾಮಸ್ಥರಿಗೆ ಮಾರಕವಾಗಿ ಪರಿಣಮಿಸಿದೆ.

ತಮ್ಮಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ಯುಕ್ತ ತಾಜ್ಯದ ನೀರನ್ನು ಸಂಸ್ಕರಣೆ ಮಾಡದೆ ಹೊರ ಬಿಟ್ಟು ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿವೆ. ಗ್ರಾಮದ ಬಳಿ ಇರುವ ಬೆಕ್ಕಾಂ, ಆಮ್ಕೊ, ಬ್ರಿಟಾನಿಯಾ, ಗಣೇಶ್ ಹರ್ಬಲ್, ಪ್ಯಾರಾ ಮೆಡಿಕಲ್ ಕಾರ್ಖಾನೆಗಳು ಸೇರಿದಂತೆ 6-7 ಕಾರ್ಖಾನೆಗಳು ತ್ಯಾಜ್ಯವನ್ನು ಸಂಸ್ಕರಣೆ ಮಾಡದೆ ನೇರವಾಗಿ ಹಳ್ಳಕ್ಕೆ ಬಿಡುತ್ತಿವೆ. ಹಳ್ಳಕ್ಕೆ ಬಿಟ್ಟ ವಿಷಪೂರಿತ ತ್ಯಾಜ್ಯ ಇಟ್ಟಮಡು ಗ್ರಾಮದ ಕೆರೆ ಸೇರುತ್ತಿದೆ.

ಕೆರೆ ನೀರು ಕೆಟ್ಟ ವಾಸನೆಯಿಂದ ಕೂಡಿದ್ದು ಗ್ರಾಮದ ಜನರು ನಿತ್ಯ ಕೆರೆಯ ಕೆಟ್ಟ ವಾಸನೆಯೊಂದಿಗೆ ಬದುಕು ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತ್ಯಾಜ್ಯದ ನೀರು ಕೆರೆ ಸೇರುತ್ತಿರುವುದರಿಂದ ಕೆರೆಯ ನೀರು ಕಲುಷಿತಗೊಂಡು ಕೆರೆಯಲ್ಲಿದ್ದ ಮೀನುಗಳು ಸಹ ಸಾವನ್ನಪ್ಪಿವೆ. ಸುಮಾರು 2 ಟನ್ ಗಳಷ್ಟು ಮೀನುಗಳು ಸಾವನ್ನಪ್ಪಿವೆ.

Related posts

8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‍ರೇಪ್

ಹಾಸ್ಟೇಲ್ ಮಕ್ಕಳಿಗೆ ಬಡಿಸಿದ ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆ

ಸುಳ್ಯ: ಕೆ.ವಿ.ಜಿ ಕಾನೂನು ವಿದ್ಯಾರ್ಥಿಗಳ 2023-24ನೇ ಸಾಲಿನ ತರಗತಿ ಆರಂಭ