Uncategorized

ಮಡಪ್ಪಾಡಿ, ಮರ್ಕಂಜ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ!

ನ್ಯೂಸ್‌ನಾಟೌಟ್‌: ಸುಳ್ಯ ತಾಲೂಕಿನ ಮಡಪ್ಪಾಡಿ ಮತ್ತು ಮರ್ಕಂಜದ ಭಾಗದ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ ಭಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಮರ್ಕಂಜ ಮತ್ತು ಪೂಂಬಾಡಿ ಪರಿಸರದ ಜನರಲ್ಲಿ ಆತಂಕ ಸೃಷ್ಟಿಸಿದೆ.

ಈ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ ಕಾಣಿಸಿಕೊಂಡ ಬೆಂಕಿ ಬಳಿಕ ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಸ್ಥಳೀಯರ ಸತತ ಪರಿಶ್ರಮದಿಂದ ಹತೋಟಿಗೆ ಬಂದಿತ್ತು. ಇದೀಗ ಸೋಮವಾರ ಸಂಜೆ ದಟ್ಟವಾಗಿ ಹೊಗೆ ಕಾಣಿಸಿದ್ದು, ಕತ್ತಲು ಆವರಿಸುತ್ತಿದ್ದಂತೆ ಮರ್ಕಂಜದ ಶೆಟ್ಟಿ ಮಜಲು – ಮಿಯೋಣಿಗುತ್ತು ಮತ್ತು ಮಡಪ್ಪಾಡಿಯ ಪೂಂಬಾಡಿ ಭಾಗದ ಅರಣ್ಯ ಪ್ರದೇಶದ ಒಂದು ಭಾಗದಲ್ಲಿ ದಟ್ಟವಾಗಿ ಬೆಂಕಿ ಕಾಣಿಸಲಾರಂಭಿಸಿದೆ.

ಇದೇ ಪರಿಸರದಲ್ಲಿ ನಿನ್ನೆಯೂ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಅರಣ್ಯ ಇಲಾಖೆಯವರು ನಂದಿಸಿದ್ದರು. ಆದರೆ ಇಂದು ಮತ್ತೆ ಬೇರೆ ಕಡೆಯಿಂದ ಬೆಂಕಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ತೆರಳಿದ್ದು, ಬೆಂಕಿ ಜ್ವಾಲೆ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ರಾಬಿನ್ ಹುಡ್ ಆರ್ಮಿಯಿಂದ 1.5 ಲಕ್ಷ ಬಡವರಿಗೆ ಕರೋನಾ ಲಸಿಕೆ ಉಚಿತವಾಗಿ ಹಂಚುವ ಅಭಿಯಾನ

ಥಾಮಸ್ ಕಪ್ ಭಾರತದ ಸಾಧನೆ ಅಣಕವಾಡಿದ ಐಎಎಸ್ ಅಧಿಕಾರಿ..!

ರಾಮಲಲ್ಲಾ ಶಿಲೆ ಸಿಕ್ಕ ಸ್ಥಳ ಮೈಸೂರಿನ ಹಾರೋಹಳ್ಳಿಯಲ್ಲೂ ಮನೆ ಮಾಡಿದ ಸಂಭ್ರಮ;ಶೀಘ್ರದಲ್ಲೇ ರಾಮ ಮಂದಿರ ನಿರ್ಮಾಣ,ಇಂದು ಭೂಮಿಪೂಜೆ