ಕರಾವಳಿ

‘ಲೋಫರ್ ನನ್ ಮಗ’ ಅಂತ ಶಾಸಕ ಹರೀಶ್ ಪೂಂಜಾ ಬೈದಿದ್ದಾರೆ, ಬೆಳ್ತಂಗಡಿ ಶಾಸಕರ ವಿರುದ್ಧ ದೂರು ದಾಖಲು, ಹರೀಶ್ ಪೂಂಜಾಗೆ ಬಂಧನದ ಭೀತಿ

ನ್ಯೂಸ್ ನಾಟೌಟ್: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಬೆಂಬಲಿಗರ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅರಣ್ಯಾಧಿಕಾರಿ ಜಯ ಪ್ರಕಾಶ್ ಕೆಕೆ ದೂರಿನ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ತಿಳಿದು ಬಂದಿದೆ.

ಚಾರ್ಮಾಡಿ ಸಮೀಪ ಅರಣ್ಯದಲ್ಲಿ ಮನೆಕಟ್ಟುವ ವಿಚಾರಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಭಾರಿ ವಾಗ್ಯುದ್ಧ ನಡೆದಿತ್ತು. ಮನೆ ಕಟ್ಟಿದ್ದನ್ನು ಕೆಡವಿ ಹಾಕಿದ್ದಕ್ಕೆ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದ್ದರು. ಬಡವರ ಮನೆಯನ್ನ ಕಿತ್ತು ಹಾಕಿದ ನಡೆಯನ್ನು ಟೀಕಿಸಿದ್ದರು. ಅ.9 ರಂದು ಅರಣ್ಯಾಧಿಕಾರಿಗಳು-ಶಾಸಕರ ನಡುವೆ ಭಾರೀ ಜಟಾಪಟಿ ನಡೆದಿತ್ತು. ಈ ವೇಳೆ ಅರಣ್ಯಾಧಿಕಾರಿ ಜಯಪ್ರಕಾಶ್ ಗೆ ‘ಲೋಫರ್ ನನ್ ಮಗ’ ಅಂತಾ ಶಾಸಕರು ಬೈದಿದ್ದಾರೆಂದು ಜಯ ಪ್ರಕಾಶ್ ಕೆಕೆ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಹಾಗೂ ಬೆಂಬಲಿಗರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಐಪಿಸಿ 1860(U/S-143, 353, 504, 149) ಅಡಿ ಪ್ರಕರಣ ದಾಖಲಾಗಿದೆ. ಇದೀಗ ಶಾಸಕರಿಗೆ ಬಂಧನದ ಭೀತಿ ಎದುರಾಗಿದೆ ಎಂದು ಹೇಳಲಾಗುತ್ತಿದೆ.


Related posts

ಅರಂಬೂರು: ಧಗಧಗನೆ ಹೊತ್ತಿಕೊಂಡ ಮರ..! ಓಡೋಡಿ ಬಂದು ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ

ಸಂಪಾಜೆ : ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಪುತ್ತೂರು:ಹಿಂದೂ ಯುವತಿ ಜೊತೆ ಮಾತನಾಡಿದನೆಂದು ಆರೋಪಿಸಿ ಅನ್ಯಕೋಮಿನ ಯುವಕನ ಮೇಲೆ ಹಲ್ಲೆ