Latestಕೇರಳಕ್ರೈಂಬೆಂಗಳೂರು

ಕಾಲೇಜು ಸಮೀಪದ ಪಬ್ ನಲ್ಲಿ ಯುವತಿಗಾಗಿ ಗುಂಪುಗಳ ನಡುವೆ ಹೊಡೆದಾಟ..! ಕೇರಳದ ಇಬ್ಬರು ಸೇರಿ ಮೂವರು ಅರೆಸ್ಟ್..!

1.1k

ನ್ಯೂಸ್‌ ನಾಟೌಟ್‌: ಯುವತಿಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದ ವೇಳೆ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ಬೆಂಗಳೂರಿನ ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಕೇರಳ ಮೂಲದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಜಿಪ್ಸನ್‌ ಜಾರ್ಜ್‌ (29), ಮೆರಿಕ್‌(29) ಮತ್ತು ರಿಫಾಯ್‌ (22) ಬಂಧಿತರು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಯದು ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾನೆ. ಜೂ. 7ರ ರಾತ್ರಿ ಪಬ್‌ ವೊಂದರ ಮುಂಭಾಗ ಈ ಗಲಾಟೆ ನಡೆದಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾ­ಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಜೂ.7ರ ತಡರಾತ್ರಿ 1 ಗಂಟೆ ಸುಮಾರಿಗೆ ಕೋರಮಂಗಲದ ಖಾಸಗಿ ಕಾಲೇಜಿನ ರಸ್ತೆಯ ಸಮೀಪ ಈ ಘಟನೆ ನಡೆದಿತ್ತು. ಆರೋಪಿಗಳು ಸಮೀಪದ ಪಬ್‌ ಗೆ ಹೋಗಿದ್ದು, ಅದೇ ಪಬ್‌ಗ ಯುವತಿ ಹಾಗೂ ಆಕೆಯ ಸ್ನೇಹಿತರು ಹೋಗಿದ್ದಾರೆ. ಒಳಗಡೆ ಎಲ್ಲರೂ ಸ್ನೇಹಿತರಂತೆ ಮಾತನಾಡಿದ್ದಾರೆ. ಹೊರಗಡೆ ಬಂದಾಗ ಆರೋಪಿಗಳು ಮದ್ಯದ ಅಮಲಿನಲ್ಲಿ ಯುವತಿಯನ್ನು ಮಾತನಾಡಿಸಲು ಮುಂದಾಗಿದ್ದಾರೆ. ಆಗ ಗಾಯಾಳು ಯದು ಎಂಬಾತ ಪ್ರಶ್ನಿಸಿದ್ದಾನೆ. ಆಗ ಆರೋಪಿಗಳು ಯದು ಮೇಲೆ ಹಲ್ಲೆ ನಡೆಸಿದ್ದಾರೆ. ಅದನ್ನು ಪ್ರಶ್ನಿಸಿ ಯುವತಿ ಹಾಗೂ ಆಕೆಯ ಸ್ನೇಹಿತರು ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಅದು ವಿಕೋಪಕ್ಕೆ ಹೋದಾಗ ಆರೋಪಿಗಳು ಯುವತಿಯ ಸ್ನೇಹಿತರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದರು. ಎರಡೂ ಗುಂಪಿನ ಹೊಡೆದಾಟದ ದೃಶ್ಯ ಸ್ಥಳದಲ್ಲಿದ್ದವರ ಮೊಬೈಲ್‌ ನಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶಿವರಾಜ್ ಕುಮಾರ್ ಸಿನಿ ಜರ್ನಿಯ 40 ವರ್ಷ ತುಂಬಿದ್ದಕ್ಕೆ ಶುಭ ಹಾರೈಸಿದ ಕಮಲ್ ಹಾಸನ್..! ಶಿವಣ್ಣ ಜೀವನ ಚರಿತ್ರೆ ಪುಸ್ತಕ ಬಿಡುಗಡೆ..!

ಚಾರಣಕ್ಕೆ ಬಂದಿದ್ದ 10 ವಿದ್ಯಾರ್ಥಿಗಳು ದಾರಿ ತಪ್ಪಿ ಕಾಡಿನಲ್ಲಿ ನಾಪತ್ತೆ..! ಮಂಗಳೂರಿನ ಬಂಡಾಜೆ ಮಾರ್ಗವಾಗಿ ಹತ್ತಿದ್ದ ವಿದ್ಯಾರ್ಥಿಗಳು ಮಧ್ಯರಾತ್ರಿ ಪತ್ತೆ..!

See also  ಲೈಂಗಿಕ ಕಿರುಕುಳ ಆರೋಪಿ ನ್ಯಾಯವಾದಿ ಕೆ. ಎಸ್.ಎನ್. ರಾಜೇಶ್ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget