ಕ್ರೈಂ

ಲೈಂಗಿಕ ಕಿರುಕುಳ ಆರೋಪಿ ನ್ಯಾಯವಾದಿ ಕೆ. ಎಸ್.ಎನ್. ರಾಜೇಶ್ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ

466
Spread the love

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ, ಮಂಗಳೂರಿನ ನ್ಯಾಯವಾದಿ ಕೆ. ಎಸ್.ಎನ್. ರಾಜೇಶ್ ಪತ್ತೆಗಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ.

ವಕೀಲ ರಾಜೇಶ್ ಪತ್ತೆಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಆರು ತಂಡಗಳನ್ನು ರಚಿಸಲಾಗಿದೆ. ಆರೋಪಿ ದೇಶ ಬಿಟ್ಟು ಹೋಗದಂತೆಯೂ ಎಚ್ಚರ ವಹಿಸಲಾಗಿದ್ದು, ಎಲ್ಲಾ ವಿಮಾನ ನಿಲ್ದಾಣಗಳಿಗೂ ಮಾಹಿತಿ ನೀಡಲಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಸಂತ್ರಸ್ತ ವಿದ್ಯಾರ್ಥಿನಿ ಅ.18 ರಂದು ಪೊಲೀಸರಿಗೆ ದೂರು ನೀಡಿದ್ದು, ಆ ನಂತರ ಆರೋಪಿ ವಕೀಲ ತಲೆಮರೆಸಿಕೊಂಡಿದ್ದ. ಆತ ತಲೆ ಮರೆಸಿಕೊಳ್ಳಲು ಸಹಕರಿಸಿದ್ದ ಆತನ ಗೆಳೆಯನನ್ನು ಪೋಲಿಸರು ಬಂಧಿಸಿದ್ದರೂ, ಆರೋಪಿಯನ್ನು ಬಂಧಿಸುವುದು ಪೊಲೀಸರಿಂದ ಇದುವರೆಗೂ ಸಾಧ್ಯವಾಗಿಲ್ಲ.

See also  ಗನ್ ​ನಿಂದ ತನ್ನ ಕಾಲಿಗೆ ಶೂಟ್ ಮಾಡಿಕೊಂಡ ಬಾಲಿವುಡ್ ನ ಖ್ಯಾತ ನಟ..! ಐಸಿಯುನಲ್ಲಿ ಚಿಕಿತ್ಸೆ..!
  Ad Widget   Ad Widget   Ad Widget   Ad Widget   Ad Widget   Ad Widget