Uncategorized

ಹಠಾತ್‌ ಕುಸಿದು ಬಿದ್ದ ಖ್ಯಾತ ಸಾಹಿತಿ, ಹರಿಹರದಲ್ಲಿ ನಡೆದ ದುರ್ಘಟನೆ, ಪ್ರಾಣಾಪಾಯದಿಂದ ಪಾರು

ನ್ಯೂಸ್ ನಾಟೌಟ್: ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಕುಸಿದು ಬಿದ್ದ ಘಟನೆ ನಡೆದಿದೆ.

ಬರಗೂರು ರಾಮಚಂದ್ರಪ್ಪ ಅವರು ಹರಿಹರದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಕವಿಗೋಷ್ಟಿ ಉದ್ಘಾಟಿಸಿದರು. ಬಳಿಕ ನಗರದ ಪಿಡಬ್ಲುಡಿ ಪ್ರವಾಸಿ ಮಂದಿರಕ್ಕೆ ಮರಳಿದ ಬರಗೂರು ರಾಮಚಂದ್ರಪ್ಪ ತಮ್ಮ ಕೊಠಡಿಯಲ್ಲಿ ಕುಸಿದು ಬಿದ್ದರು. ಸ್ಥಳದಲ್ಲಿದ್ದ ಸಂಘಟಕರು ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಈಗ ಆರೋಗ್ಯ ಸುಧಾರಿಸುತ್ತಿದೆ. ನನಗೆ ಅಧಿಕ ರಕ್ತದೊತ್ತಡ ಮತ್ತ ಸಕ್ಕರೆ ಪರೀಕ್ಷೆ ನಡೆಸಿದರು. ಎಲ್ಲ ನಾರ್ಮಲ್ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಹಿಂದೆ ಈ ರೀತಿ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ತಲೆತಿರುಗಿದಂತಾಗಿ ಬಿದ್ದೆ’ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

Related posts

9 ವರ್ಷದ ಬಳಿಕ ಆಲಿಕಲ್ಲು ಮಳೆ..! ಬೀದರ್‌ನಲ್ಲಿ ಜನಜೀವನ ಅಸ್ತವ್ಯಸ್ತ!

ಎರಡು ಕಿ.ಮೀ. ಉದ್ದದ ರೈಲ್ವೆ ಹಳಿಯನ್ನೇ ಕದ್ದೊಯ್ದ ಖದೀಮರು!

ಮಗು ಪತಿ ಜತೆ ಮಾತನಾಡುವುದು ಇಷ್ಟವಿರಲಿಲ್ಲ,ಪ್ರಜ್ಞೆ ತಪ್ಪಿಸಲು ಯತ್ನಿಸಿದೆ; ನನಗೂ ಮಗನೆಂದ್ರೆ ತುಂಬಾ ಪ್ರೀತಿ, ನನಗೆ ಕಡಿಮೆ ಶಿಕ್ಷೆ ಕೊಡಿ ಪ್ಲೀಸ್‌-ಸುಚನಾ ಸೇಠ್