Uncategorized

ಬಸ್ ನಿಂದ ಇಳಿದು ಕಾಲಿಗೆ ಬುದ್ಧಿ ಹೇಳಿದ ನಕಲಿ ಅಧಿಕಾರಿ

ನ್ಯೂಸ್ ನಾಟೌಟ್: ನಕಲಿ ಟಿಕೆಟ್ ತಪಾಸಣೆ ಅಧಿಕಾರಿಗೆ ನಿರ್ವಾಹಕ ಮತ್ತು ಪ್ರಯಾಣಿಕರು ಗುರುತಿನ ಚೀಟಿ ಕೇಳಿದ್ದಕ್ಕೆ ಬಸ್ ನಿಂದ ಇಳಿದು ಓಡಿ ಹೋದ ಘಟನೆ ವಡಗೇರಾ ತಾಲ್ಲೂಕಿನ ಖಾನಾಪುರದಲ್ಲಿ ನಡೆದಿದೆ.

ಟಿಕೆಟ್ ತಪಾಸಣೆ ಅಧಿಕಾರಿ ಎಂದು ಬಿಂಬಿಸಿಕೊಂಡ ವ್ಯಕ್ತಿ, ಜಿಲ್ಲೆಯ ಸುರಪುರದಿಂದ ಯಾದಗಿರಿ ಕಡೆ ತೆರಳುತ್ತಿದ್ದ ಕೆಎ 33, ಎಫ್ 0203 ಸಾರಿಗೆ ಬಸ್ ಗೆ ಖಾನಾಪುರ ಗ್ರಾಮದಲ್ಲಿ ಹತ್ತಿದ್ದಾರೆ.‌ ಈ ವೇಳೆ ಟಿಕೆಟ್ ಪರಿಶೀಲನೆ ನಡೆಸಿದ್ದಾರೆ. ಅನುಮಾನಗೊಂಡ ನಿರ್ವಾಹಕ ಮತ್ತು ಪ್ರಯಾಣಿಕರು, ಸಫಾರಿ ಬಟ್ಟೆ ಹಾಕಿದ್ದ ನಕಲಿ ಟಿಕೆಟ್ ತಪಾಸಣೆ ಅಧಿಕಾರಿಯ ಐಡಿ ಕಾರ್ಡ್ ಕೇಳಿದ್ದಕ್ಕೆ ಬಸ್ ನಿಂದದ ಇಳಿದು ಎಲ್ಲೂ ನಿಲ್ಲದೇ ಓಡಿಹೋಗಿದ್ದಾರೆ. ಬಸ್ ಇಳಿಯುವಾಗ ಆತನಿಂದ ನಿರ್ವಾಹಕ ಮತ್ತು ಪ್ರಯಾಣಿಕರು ಮೊಬೈಲ್ ಕಿತ್ತಿಕೊಂಡಿದ್ದಾರೆ. ನಂತರ ಯಾದಗಿರಿಯ ಸಾರಿಗೆ ಅಧಿಕಾರಿಗೆ ನಿರ್ವಾಹಕ ಮೊಬೈಲ್ ಒಪ್ಪಿಸಿದ್ದಾರೆ.

Related posts

ಮಡಪ್ಪಾಡಿ, ಮರ್ಕಂಜ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ!

ಶಿವಮೊಗ್ಗ: ಕುಕ್ಕರ್ ಬಾಂಬ್ ಆರೋಪಿಗೆ ಶಿವಮೊಗ್ಗದಲ್ಲಿ ಡ್ರಿಲ್‍..!

ನಿಮ್ಮ ಮಕ್ಕಳು ಮೊಬೈಲ್ ನೋಡ್ತಾ ಊಟ ಮಾಡ್ತಾರಾ..?ಹಾಗಾದರೆ ಪೋಷಕರೇ ಹುಷಾರ್,ಈ ವಿಚಾರ ತಿಳ್ಕೊಳ್ಳಿ