ಕರಾವಳಿಕ್ರೈಂ

ಪೊಲೀಸರ ಸೋಗಿನಲ್ಲಿ ಹಣ ವಸೂಲು ಮಾಡಿದವರ ಬಂಧನ

ನ್ಯೂಸ್‌ನಾಟೌಟ್‌: ಪೊಲೀಸರ ಹೆಸರಿನಲ್ಲಿ ಹಣ ವಸೂಲು ಮಾಡುತ್ತಿದ್ದ ಆರೋಪಿಗಳನ್ನು ಮಣಿಪಾಲ ಠಾಣೆಯ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಶಿರ್ವ ಮೂಲದ ಮಂಜುನಾಥ ಅವರು ಮಣಿಪಾಲದ ಅರ್ಬಿಫಾಲ್ಸ್‌ ಬಳಿ ಸ್ನೇಹಿತರೊಂದಿಗೆ ಮೇ 26ರಂದು ಮಾತನಾಡುತ್ತಿರುವ ವೇಳೆ ಆರೋಪಿಗಳಾದ ಹನುಮಂತಪ್ಪ ಹಾಗೂ ಮಹಾದೇವಪ್ಪ ಸ್ಥಳಕ್ಕೆ ಆಗಮಿಸಿ ತಾನು ಮಣಿಪಾಲ ಠಾಣೆಯ ಪೊಲೀಸ್, ನೀವು ಇಲ್ಲಿ ಯಾಕೆ ಕುಳಿತಿದ್ದೀರಿ? ನಿಮ್ಮ ಮೇಲೆ ಕೇಸ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಬಳಿಕ ಮಣಿಪಾಲ ಠಾಣೆಯ ಎಸ್‌ಐ ಅವರಿಗೆ ಫೋನ್ ಮಾಡುತ್ತೇನೆ ಅವರು ಹೇಳಿದರೆ ಬಿಡುತ್ತೇನೆ ಎಂದು ಹೇಳಿ ಮತ್ತೋರ್ವ ಆರೋಪಿ ಲಕ್ಷ್ಮಣ ಕುಪ್ಪಗೊಂಡ ಅವರಿಗೆ ಕರೆ ಮಾಡಿ ಲೌಡ್‌ಸ್ಪೀಕರ್ ಇಟ್ಟು ಮಾತನಾಡಿದ್ದಾರೆ.

ಈ ವೇಳೆ ಆ ವ್ಯಕ್ತಿ ತಾನು ಮಣಿಪಾಲ ಠಾಣೆಯ ಎಸ್‌ಐ ಮಾತನಾಡುತ್ತಿದ್ದೇನೆ. 5 ಸಾವಿರ ರೂ.ಅವರಿಗೆ ನೀಡು ಇಲ್ಲವಾದರೆ ಜೀಪು ಕಳುಹಿಸಿ ಪೊಲೀಸ್ ಠಾಣೆಗೆ ಕರೆಸಿಕೊಳ್ಳುತ್ತೇನೆ ಎಂದು ಬೆದರಿಸಿದ ಪರಿಣಾಮ ಮಂಜುನಾಥ ಅವರು ಆರೋಪಿಗಳು ಸೂಚಿಸಿದ ಮೊಬೈಲ್ ಸಂಖ್ಯೆಗೆ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಅನುಮಾನಗೊಂಡ ಮಂಜುನಾಥ ಅವರು ಮಣಿಪಾಲ ಠಾಣೆಗೆ ಬಂದು ದೂರು ನೀಡಿದಾಗ ವಿಚಾರ ಬೆಳಕಿಗೆ ಬಂದಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮೃತವೆಂದು ದೃಢೀಕರಿಸಿದ್ದ ಚುನಾವಣಾಧಿಕಾರಿ ಶವಾಗಾರದಲ್ಲಿ ಜೀವಂತ..! ತಾಯಿಯ ಸ್ಪರ್ಶ ಮಾಡಿದ ಪವಾಡವೇನು?

ಕನ್ನಡಕ್ಕಾಗಿ ಕೇರಳ ಸರ್ಕಾರವನ್ನೇ ನಡುಗಿಸಿದ ಕನ್ನಡಿಗ ವಿದ್ಯಾರ್ಥಿಗಳು..! ನಟ ರಿಷಬ್ ಶೆಟ್ಟಿ ನಿರ್ದೇಶನದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ದೃಶ್ಯ ನೆನಪಿಸಿದ ಪ್ರತಿಭಟನೆ

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ, ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆ ನಟಿಯ ಮನೆಗೆ ಬಂದ ಪುಟ್ಟಗೌರಿ