Uncategorized

97 ವರ್ಷದಲ್ಲೂ ಕುಗ್ಗದ ಕಾಯಕ ಪ್ರೀತಿ..!ವಕೀಲರಾಗಿ ಕರ್ತವ್ಯ ನಿರ್ವಹಿಸಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದ ಕೇರಳದ ವ್ಯಕ್ತಿ!

ನ್ಯೂಸ್ ನಾಟೌಟ್ : ಸಾಮಾನ್ಯವಾಗಿ ಕೆಲಸಕ್ಕೆ ಹೋಗುವವರು ೫೦ ವರ್ಷ ತುಂಬುತ್ತಿದ್ದ ಹಾಗೆ ವಯಸ್ಸಾಯ್ತು ಇನ್ನು ಕೆಲಸ ಮಾಡಕ್ಕಾಗಲ್ಲ ಅಂತ ವಿದಾಯ ಹೇಳಿ ಬಿಡುತ್ತಾರೆ.ಆದರೆ ಕೇರಳದ ವ್ಯಕ್ತಿಯೊಬ್ಬರು ಬರೋಬ್ಬರಿ ೯೭ನೇ ವಯಸ್ಸಿನಲ್ಲೂ ವಕೀಲರಾಗಿ ಕರ್ತವ್ಯ ನಿರ್ವಹಿಸಿ ಅಚ್ಚರಿ ಮೂಡಿಸಿದ್ದಾರೆ.ಮಾತ್ರವಲ್ಲ ವಕೀಲರಾಗಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ.

ಕೇರಳದ ಪಾಲಕ್ಕಾಡ್‌ನ 97 ವರ್ಷದ ವಕೀಲರಾದ ಪಿ. ಬಾಲಸುಬ್ರಮಣೀಯನ್ ಮೆನನ್ ಅವರು 73 ವರ್ಷ 60 ದಿನಗಳ ಕಾಲ ವಕೀಲರಾಗಿ ಕಾರ್ಯ ನಿರ್ವಹಿಸುವ ಮೂಲಕ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಕಿರಿಯ ವಯಸ್ಸಿನ ವಕೀಲರಂತೆ ಮನೆನ್ ಅವರು ಈಗಲೂ ತುಂಬಾ ಕ್ರಿಯಾಶೀಲರಾಗಿದ್ದು, ಪ್ರತಿ ದಿನ ನ್ಯಾಯಾಲಯಕ್ಕೆ ತೆರಳಿ ತನ್ನ ಕಕ್ಷಿದಾರರನ್ನು ಭೇಟಿಯಾಗುತ್ತಾರೆ ಅನ್ನೋದು ವಿಶೇಷವಾಗಿದೆ.

‘‘ನನ್ನನ್ನು ನಂಬಿ ಕಕ್ಷಿದಾರರು ಪ್ರಕರಣಗಳನ್ನು ತೆಗೆದುಕೊಂಡು ಬರುತ್ತಾರೆ. ಆದುದರಿಂದ ನಾನು ಅವರಿಗೆ ಎಷ್ಟು ಸಾಧ್ಯವೋ ಅಷ್ಟು ನೆರವು ನೀಡುತ್ತೇನೆ’’ ಎಂದು ಅವರು ಹೇಳಿದ್ದಾರೆ.ಪಾಲೆಕ್ಕಾಡ್‌ನ ಸಾಂಪ್ರದಾಯಿಕ ಕುಟುಂಬದಿಂದ ಬಂದ ಮೆನನ್ ಅವರು, ನ್ಯಾಯಾಲಯಗಳಲ್ಲಿ ಹೆಚ್ಚು ವಾದಿಸುವಲ್ಲಿ ನಂಬಿಕೆ ಇಲ್ಲ ಎಂದು ಹೇಳುತ್ತಾರೆ.

ಅಲ್ಲದೇ, ಅವರ ವಾದ ಹಾಗೂ ಪಾಟಿ ಸವಾಲು ಕೂಡ ಸಂಕ್ಷಿಪ್ತವಾಗಿರುತ್ತದೆ.ಮದ್ರಾಸ್ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಪಡೆದ ಬಳಿಕ ಮೆನನ್ ಅವರು 1950ರಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ‘‘ನೀವು ಯಾವಾಗ ನಿವೃತ್ತಿಯಾಗುತ್ತೀರಿ?’’ ಎಂದು ಯಾರಾದರೂ ಕೇಳಿದರೆ, ಅವರು, ‘‘ಎಲ್ಲಿವರೆಗೆ ನನ್ನ ಆರೋಗ್ಯ ಸಹಕರಿಸುತ್ತದೋ, ಅಲ್ಲಿವರೆಗೆ ನನ್ನ ಕಕ್ಷಿದಾರರನ್ನು ಭೇಟಿಯಾಗುತ್ತೇನೆ’’ ಎನ್ನುತ್ತಿದ್ದಾರೆ.ಇವರ ಈ ಕೆಲಸ ಇತರರಿಗೂ ಪ್ರೇರಣೆಯಾಗಬಹುದು ಎಂದು ಮೆನನ್ ಅಭಿಪ್ರಾಯ.

Related posts

ಸುಳ್ಯ ತಾಲೂಕು ಮಟ್ಟದ ರೈತ ಬಂಧು ಅಭಿಯಾನಕ್ಕೆ ಚಾಲನೆ: ಅರ್ಹ ರೈತರಿಗೆ ಮಹಾತ್ಮಗಾಂಧಿ ನರೇಗಾದಡಿ 27,000 ಆರ್ಥಿಕ ನೆರವು

ಕಮಲಕ್ಕೆ ಗುಡ್ ಬೈ ಹೇಳಿದ ಶೆಟ್ಟರ್ ಗೆ ‘ಕೈ’ ನಿಂದ ಬಿಗ್ ಆಫರ್,ರಾಹುಲ್ ಸಮ್ಮಖದಲ್ಲಿಯೇ ಕಾಂಗ್ರೆಸ್ ಸೇರ್ಪಡೆ?

18 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ